An interesting and cinematic incident where cows chased a car that hit a calf and stopped it, took place in Rai'garh of Chhattisgarh state. viral video | ಕರುವಿಗೆ ಡಿಕ್ಕಿ ಹೊಡೆದ ಕಾರನ್ನು ಬೆನ್ನಟ್ಟಿ ನಿಲ್ಲಿಸಿದ ಆಕಳುಗಳ..!

viral video | ಕರುವಿಗೆ ಡಿಕ್ಕಿ ಹೊಡೆದ ಕಾರನ್ನು ಬೆನ್ನಟ್ಟಿ ನಿಲ್ಲಿಸಿದ ಆಕಳುಗಳ..!

ರಾಯ್’ಗರ್ (ಛತ್ತೀಸ್’ಗಢ), ಡಿ. 24: ಕರುವೊಂದಕ್ಕೆ ಡಿಕ್ಕಿ ಹೊಡೆದ ಕಾರನ್ನು ಆಕಳುಗಳು ಬೆನ್ನಟ್ಟಿ ನಿಲ್ಲಿಸಿದ ಕುತೂಹಲಕಾರಿ ಹಾಗೂ ಸಿನಿಮೀಯ ಶೈಲಿಯ ಘಟನೆಯೊಂದು, ಛತ್ತಿಸ್’ಗಢ ರಾಜ್ಯದ ರಾಯ್’ಗರ್ ಎಂಬಲ್ಲಿ ನಡೆದಿದೆ.

ಸದರಿ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಆದರೆ ಸದರಿ ಘಟನೆ ನಡೆದಿದ್ದು ಯಾವಾಗ? ಎಂಬುವುದರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಏನಾಯ್ತು? : ರಾಯ್’ಗರ್ ಸ್ಟೇಷನ್ ಚೌಕ್ ಬಳಿ ವೇಗವಾಗಿ ಆಗಮಿಸಿದ ಕಾರೊಂದು, ರಸ್ತೆಯಲ್ಲಿದ್ದ ಕರುವಿಗೆ ಡಿಕ್ಕಿ ಹೊಡೆದಿತ್ತು. ಕಾರಿನಡಿ ಕರು ಸಿಲುಕಿ ಬಿದ್ದಿತ್ತು. ಆದಾಗ್ಯೂ ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿದ್ದ.

ಕಾರಿನಡಿ ಕರು ಸಿಲುಕಿ ಬಿದ್ದಿರುವುದನ್ನು ಗಮನಿಸಿದ ಅದರ ತಾಯಿ ಹಾಗೂ ಇತರೆ ಆಕಳುಗಳು, ಕಾರನ್ನು ಬೆನ್ನಟ್ಟಿ ಬಂದಿವೆ. ಆಕಳುಗಳು ಬರುತ್ತಿರುವುದನ್ನು ಗಮನಿಸಿದ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆಕಳುಗಳು ಕಾರನ್ನು ಸುತ್ತುವರಿದು ನಿಂತಿವೆ. ಆಕಳುಗಳು ಕರುವಿಗಾಗಿ ಕಾರಿನ ಸುತ್ತ ಓಡಾಡಲಾರಂಭಿಸಿದೆ.

ಸದರಿ ಘಟನೆ ಗಮನಿಸಿದ ಸುತ್ತಮುತ್ತಲಿನ ನಾಗರೀಕರು, ಕಾರಿನ ಬಳಿ ಆಗಮಿಸಿ ಚಾಲಕನನ್ನು ವಿಚಾರಿಸಿದ್ದಾರೆ. ಈ ವೇಳೆ ಅಪಘಾತದ ವಿವರ ಗೊತ್ತಾಗಿದೆ. ತಕ್ಷಣವೇ ಕಾರಿನಡಿ ಸಿಲುಕಿ ಬಿದ್ದಿದ್ದ ಕರುವನ್ನು ನಾಗರೀಕರು ರಕ್ಷಣೆ ಮಾಡಿದ್ದಾರೆ.

ಕಾರಿನಡಿ ಸಿಲುಕಿ ಸುಮಾರು 200 ಮೀಟರ್ ಎಳೆದು ಬಂದಿದ್ದರಿಂದ, ಕುರುವಿಗೆ ಗಾಯವಾಗಿದೆ. ಪಶು ವೈದ್ಯರ ಮೂಲಕ ನಾಗರೀಕರು ಕರುವಿಗೆ  ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೈರಲ್ : ಸದರಿ ಘಟನೆಯ ಸಿಸಿ ಕ್ಯಾಮರಾದ ದೃಶ್ಯಾವಳಿ ಸೋಶಿಯಲ್ ಮೀಡಯಾದಲ್ಲಿ ವೈರಲ್ ಆಗಿದ್ದು, ಆಕಳುಗಳ ಸಕಾಲಿಕ ಕ್ರಮದ ಬಗ್ಗೆ ವ್ಯಾಪಕ ಮೆಚ್ಚುಗೆ – ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

An interesting and cinematic incident where cows chased a car that hit a calf and stopped it took place in Rai’garh of Chhattisgarh state. The video of the incident has gone viral on social media, attracting the attention of netizens. In addition, widespread appreciation and praises are being expressed. But when did this incident happen? No clear information is available.

Shimoga: Two people are missing in separate incidents - police request to help in the search shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ Previous post shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
sorab | Soraba: Gram PDO Lokayukta who was receiving bribes for e-accounting! sorab | ಸೊರಬ : ಇ – ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ! Next post sorab | ಸೊರಬ : ಇ – ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ!