ಅಸೆಂಬ್ಲಿ ಎಲೆಕ್ಷನ್ : ಎಎಪಿ ಪಕ್ಷದ ಮೊದಲ ಹಂತದ ಪಟ್ಟಿ ಪ್ರಕಟ

  • ಶಿವಮೊಗ್ಗ ನಗರ  – ಟಿ.ನೇತ್ರಾವತಿ, ಭದ್ರಾವತಿ – ಆನಂದ್, ಸಾಗರ – ಕೆ.ದಿವಾಕರ್

ಶಿವಮೊಗ್ಗ, ಮಾ. 20: ಮುಂಬರುವ ವಿಧಾನಸಭೆ ಚುನಾವಣೆಗೆ, ಆಮ್ ಆದ್ಮಿ ಪಕ್ಷ 80 ಕ್ಷೇತ್ರಗಳಿಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಟಿ.ನೇತ್ರಾವತಿ, ಸಾಗರ ವಿಧಾನಸಭಾ ಕ್ಷೇತ್ರದಿಂದ ವಕೀಲ ಕೆ.ದಿವಾಕರ್, ಭದ್ರಾವತಿಯಿಂದ ಆನಂದ್ ಅವರಿಗೆ ಟಿಕೆಟ್ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಶಿಕಾರಿಪುರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಲಿದೆ. ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳಿಗೂ ಎಎಪಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಆ ಪಕ್ಷದ ಸ್ಥಳೀಯ ಮುಖಂಡರು ಮಾಹಿತಿ ನೀಡುತ್ತಾರೆ.

‘ಒಟ್ಟಾಗಿ ಕಾರ್ಯನಿರ್ವಹಣೆ’ : ಜಿಲ್ಲಾಧ್ಯಕ್ಷ ಕಿರಣ್

*** ‘ಪಕ್ಷದ ರಾಜ್ಯ ಸಮಿತಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಉಳಿದ ಕ್ಷೇತ್ರಗಳಿಗೆ ಹಂತಹಂತವಾಗಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದಾರೆ’ ಎಂದು ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಅವರು ತಿಳಿಸಿದ್ದಾರೆ.  

Previous post ಆಜಾನ್ ಕೂಗಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಣೆ : ಪೊಲೀಸರೊಂದಿಗೆ ವಾಕ್ಸಮರ!
Next post <strong>ಓರ್ವನನ್ನೇ ಮೂರು ಬಾರಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!</strong>