shimoga | After the government bus travel fare hike demand for private bus fare hike! shimoga | ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಹೆಚ್ಚಳಕ್ಕೆ ಆಗ್ರಹ!

shimoga | ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಹೆಚ್ಚಳಕ್ಕೆ ಆಗ್ರಹ!

ಶಿವಮೊಗ್ಗ, ಜ. 7: ರಾಜ್ಯ ಸರ್ಕಾರ ಸರ್ಕಾರಿ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡಿದ್ದು, ಅದರಂತೆ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ. 20 ರಷ್ಟು ಪರಿಷ್ಕರಣೆಗೆ ಅವಕಾಶ ಮಾಡಬೇಕೆಂದು, ಶಿವಮೊಗ್ಗ ಖಾಸಗಿ ಬಸ್ ಮಾಲೀಕರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಯ ಪದಾಧಿಕಾರಿಗಳು ಜ. 7 ರಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್ ಟಿ ಓ) ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದೆ.

ಸರ್ಕಾರಿ ಹಾಗೂ ಖಾಸಗಿ ಬಸ್ ಪ್ರಯಾಣ ದರದಲ್ಲಿ ಏಕರೂಪ ದರ ನಿಗದಿಗೊಳಿಸುವಂತೆ, ಕಳೆದ ಹಲವು ವರ್ಷಗಳಿಂದ ಆಗ್ರಹಿಸಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಸರ್ಕಾರ ದರ ಪರಿಷ್ಕರಣೆ ಮಾಡಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಖಾಸಗಿ ಬಸ್ ಗಳು ಸಂಚರಿಸುವ ಮಾರ್ಗದಲ್ಲಿ ಸರ್ಕಾರಿ ಬಸ್ ಗಳು ಕೂಡ ಸಂಚರಿಸುತ್ತವೆ. ಕಳೆದ 10 ವರ್ಷಗಳಿಂದ ದರ ಪರಿಷ್ಕರಣೆ ಮಾಡಿಲ್ಲ. ಮೂರು ಸರ್ಕಾರಗಳು ಬದಲಾದರೂ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಸರ್ಕಾರದ ಶಕ್ತಿ ಯೋಜನೆ ಸೇರಿದಂತೆ ನಾನಾ ಕಾರಣಗಳಿಂದ ಖಾಸಗಿ ಬಸ್ ಮಾಲೀಕರು ನಷ್ಟಕ್ಕೊಳಗಾಗಿದ್ದಾರೆ. ಉದ್ಯಮದಲ್ಲಿ ಸಾವಿರಾರು ನೌಕರರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ.

ಹೊಸ ವಾಹನಗಳ ಖರೀದಿ ಬೆಲೆ, ಬಿಡಿ ಭಾಗಗಳ ಬೆಲೆ ಹೆಚ್ಚಾಗಿದೆ. ಆ ಪ್ರಮಾಣದಲ್ಲಿ ದರ ಪರಿಷ್ಕರಣೆ ಆಗಿಲ್ಲ. ಇದಕ್ಕಾಗಿ ಪ್ರಯಾಣದ ಪರಿಷ್ಕರಣೆ ಆಯೋಗವನ್ನು ರಚಿಸಿ ಸಂದರ್ಭಕ್ಕೆ ತಕ್ಕಂತೆ ಬಸ್ ದರ ಖಾಸಗಿ ಸಾರಿಗೆ ಬಸ್‌ಗಳಿಗೂ ಪರಿಷ್ಕರಣೆ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಘಟನೆ ಆಗ್ರಹಿಸಿದೆ. ಖಾಸಗಿ ಬಸ್ ಮಾಲೀಕರ ಸಂಘಟನೆ ಅಧ್ಯಕ್ಷ ಆರ್.ರಂಗಪ್ಪ ನೇತೃತ್ವದಲ್ಲಿ ಮನವಿ ಪತ್ರ ಅರ್ಪಿಸಲಾಗಿದೆ.

Shimoga January 7: The Shimoga Private Bus Owners’ Association has demanded that the state government has increased the fare of government buses by 15 percent, and accordingly the fare of private buses should be revised by 20 percent.

There has been a demand for setting uniform fares in government and private bus fares for the past several years. But the organization has expressed displeasure that the government has not revised the rates till now.

gruhalakshmi scheme | ಮೇ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಸಂದಾಯ! gruhalakshmi scheme | Three months of payment of Gruhalakshmi scheme in May! Previous post shimoga | ಯಾವಾಗ ಬರಲಿದೆ ಗೃಹಲಕ್ಷ್ಮೀ ಯೋಜನೆ ಹಣ? ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷರು ಹೇಳಿದ್ದೇನು?
shimoga | Shimoga: Implementation of 'Traffic Police Cutout' on major roads! ಶಿವಮೊಗ್ಗ : ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್ ಕಟೌಟ್ ಗಳ ಅಳವಡಿಕೆ! ವರದಿ : ಬಿ. ರೇಣುಕೇಶ್ b renukesha Next post shimoga | ಶಿವಮೊಗ್ಗ : ಪ್ರಮುಖ ರಸ್ತೆಗಳಲ್ಲಿ ರಾರಾಜಿಸಲಿವೆ ‘ಟ್ರಾಫಿಕ್ ಪೊಲೀಸ್ ಕಟೌಟ್..!’