shimoga | CA Site Allotment : Shimoga-Bhadravati Urban Development Authority Announcement? shimoga | ಸಿಎ ನಿವೇಶನ ಹಂಚಿಕೆ : ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಪ್ರಕಟಣೆಯೇನು?

shimoga | ಸಿಎ ನಿವೇಶನ ಹಂಚಿಕೆ : ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಪ್ರಕಟಣೆಯೇನು?

ಶಿವಮೊಗ್ಗ (shivamogga), ಫೆ. 2: ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ವು, ನಾಗರೀಕ ಸೌಲಭ್ಯ ನಿವೇಶನ (ಸಿಎ ಸೈಟ್) ಹಂಚಿಕೆ ಸಂಬಂಧ ಅರ್ಹ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಸಂಬಂಧ ಸೂಡಾ ಆಡಳಿತವು ಫೆಬ್ರವರಿ 1 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಸೂಡಾ ವ್ಯಾಪ್ತಿಯಲ್ಲಿ ನಾಗರೀಕ ಸೌಲಭ್ಯಕ್ಕಾಗಿ ಪ್ರಾಧಿಕಾರ / ಖಾಸಗಿ ಬಡಾವಣೆಗಳಲ್ಲಿ ಮೀಸಲಿರಿಸಿದ, ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1960 ರ ಅಡಿಯಲ್ಲಿ ನೋಂದಣಿಯಾದ ಸಹಕಾರ ಸಂಘ ಅಥವಾ ಸಂಘಗಳಿಂದ ನೋಂದಾಯಿತ ಶೈಕ್ಷಣಿಕ, ಧಾರ್ಮಿಕ ಚಾರಿಟಬಲ್ ಟ್ರಸ್ಟ್ ನವರಿಂದ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ನಿಯಮ 1991 ರ ಪ್ರಕಾರ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.

ನೊಂದಾಣಿಗಾಗಿ ಅರ್ಜಿ ನಮೂನೆ-1, ನಿವೇಶ ಮಂಜೂರಾತಿ ಅರ್ಜಿ ನಮೂನೆ-2 ಗಳನ್ನು ಫೆ.2 ರಿಂದ 15 ರ ಮಧ್ಯಾಹ್ನ 3 ಗಂಟೆವರೆಗೆ ನೀಡಲಾಗುತ್ತಿದ್ದು, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ರೂ.500 ಶುಲ್ಕ ಪಾವತಿಸಿ ಪಡೆಯಬೇಕು.

ಅರ್ಜಿಯನ್ನು ಮಾರ್ಚ್ 3 ರ ಸಂಜೆ 5 ಗಂಟೆಯೊಳಗೆ ಭರ್ತಿಗೊಳಿಸಿ, ಖುದ್ದಾಗಿ ಕಚೇರಿಗೆ ಅಥವಾ ನೋಂದಣಿ ಅಂಚೆಯ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.shivamogga.uda.gov.in  ನಲ್ಲಿ ಅಥವಾ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಬಹುದು ಎಂದು ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹಾಗೂ ಆಯುಕ್ತರಾದ ವಿಶ್ವನಾಥ ಪಿ.ಮುದಜ್ಜಿ ತಿಳಿಸಿದ್ದಾರೆ.

Shimoga, February 2: Shimoga-Bhadravati Urban Development Authority (SUDA) has invited applications from eligible associations for allotment of Civic Facility Site (CA Site).

In this regard, the Suda administration issued a press release on February 1. Allotment of reserved, civic amenity plots in authority / private estates for civic amenity under Suda.

Water from Bhadra Dam to River: When? What is the reason? ಭದ್ರಾ ಡ್ಯಾಂನಿಂದ ನದಿಗೆ ನೀರು : ಯಾವಾಗ? ಕಾರಣವೇನು Previous post bhadra dam | ಭದ್ರಾ ಡ್ಯಾಂನಿಂದ ನದಿಗೆ ನೀರು : ಯಾವಾಗ? ಕಾರಣವೇನು?
bengaluru | Knee pain for CM: Checkup in hospital – official programs cancelled! bengaluru | ಸಿಎಂಗೆ ಮಂಡಿ ನೋವು : ಆಸ್ಪತ್ರೆಯಲ್ಲಿ ತಪಾಸಣೆ – ಅಧಿಕೃತ ಕಾರ್ಯಕ್ರಮಗಳು  ರದ್ದು! Next post bengaluru | ಸಿಎಂಗೆ ಮಂಡಿ ನೋವು : ಆಸ್ಪತ್ರೆಯಲ್ಲಿ ತಪಾಸಣೆ – ಅಧಿಕೃತ ಕಾರ್ಯಕ್ರಮಗಳು  ರದ್ದು!