
shimoga | ಪತ್ನಿಯ ಹತ್ಯೆ : ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ!
ಶಿವಮೊಗ್ಗ (shivamogga), ಫೆ. 2: ಪತ್ನಿಯ ಹತ್ಯೆ ನಡೆಸಿದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ, ಶಿವಮೊಗ್ಗ ನಗರದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗದ ಮಲ್ಲಿಕಾರ್ಜುನ ನಗರದ ನಿವಾಸಿ ಸಯ್ಯದ್ ಪರ್ವೀಜ್ (25) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ.
ನ್ಯಾಯಾಧೀಶರಾದ ಮರುಳ ಸಿದ್ಧಾರಾಧ್ಯ ಹೆಚ್ ಜೆ ಅವರು 31-01-2025 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತಾ ಬಿ ಎಸ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 01-11-2020 ರಂದು ಸಂಜೆ ಶಿಕ್ಷೆಗೊಳಗಾದ ಪರ್ವೀಜ್, ಕೌಟಂಬಿಕ ವಿಚಾರವಾಗಿ 23 ವರ್ಷದ ಪತ್ನಿಯ ಜೊತೆ ಜಗಳ ಮಾಡಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ಹಾಗೂ ಸ್ಕ್ರೂ ಡ್ರೈವರ್ ನಿಂದ ಪತ್ನಿಯ ಹೊಟ್ಟೆ ಮತ್ತು ಬೆನ್ನು ಸೇರಿದಂತೆ ಹಲವು ಕಡೆ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ.
ಈ ಸಂಬಂಧ ಮೃತಳ ತಂದೆಯು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಸರ್ಕಲ್ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಟಿ (ಹಾಲಿ ಶಿವಮೊಗ್ಗ ಉಪ ವಿಭಾಗ – ಬಿ ಡಿವೈಎಸ್ಪಿ) ಅವರು, ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
Shimoga, February 2: The 1st Additional District and Sessions Court of Shimoga city has sentenced the husband who killed his wife to life imprisonment and a fine of Rs 25,000.
Background of the case: On 01-11-2020 in the evening, Parveez had a fight with his 23-year-old wife over a family matter. Abusing him with unintelligible words, he brutally murdered his wife by stabbing her in many places including stomach and back with a knife and a screw driver.
In this regard, the deceased’s father had filed a complaint at the Tunga Nagar police station. The then Circle Inspector Sanjeev Kumar T (now Shimoga Sub Division – B DySP) investigated the case. He filed a charge sheet in the court.