
shikaripur | ಶಿಕಾರಿಪುರ : ಪ್ರತಿಭಟನಾ ಸ್ಥಳದಲ್ಲಿಯೇ ವಿಷಪ್ರಾಶನಕ್ಕೆ ಮುಂದಾದ ರೈತ!
ಶಿಕಾರಿಪುರ (shikaripura), ಫೆ. 3: ಫಲವತ್ತಾದ ಜಮೀನು ಹಾಗೂ ತೋಟಗಳ ಮೂಲಕ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ಮುಂದಾಗಿರುವ ಕೆಪಿಟಿಸಿಎಲ್ ಕ್ರಮ ಖಂಡಿಸಿ, ಫೆ. 3 ರಂದು ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳದಲ್ಲಿಯೇ, ರೈತರೋರ್ವರು ವಿಷಪ್ರಾಶನಕ್ಕೆ ಮುಂದಾದ ಘಟನೆ ನಡೆಯಿತು!
ತಕ್ಷಣವೇ ಪ್ರತಿಭಟನಾ ಸ್ಥಳದಲ್ಲಿದ್ದ ಮುಖಂಡರು ಹಾಗೂ ಪೊಲೀಸರು, ರೈತನ ಬಳಿಯಿದ್ದ ವಿಷದ ಬಾಟಲಿ ಕಿತ್ತುಕೊಂಡಿದ್ದಾರೆ. ದಿಢೀರ್ ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲ ಸಮಯ ಗೊಂದಲ ವಾತಾವರಣ ನಿರ್ಮಾಣವಾಗುವಂತಾಗಿತ್ತು.
ಪ್ರತಿಭಟನೆ : ಶಿಕಾರಿಪುರ ತಾಲೂಕು ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮಗಳ ಮೂಲಕ ಅಂಜನಾಪುರ ಮತ್ತು ಕೋರಲಹಳ್ಳಿ ಗ್ರಾಮದ ಗ್ರಿಡ್ ಗೆ ಹೈಟೆನ್ಷನ್ ವಿದ್ಯುತ್ ಲೈನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೆಪಿಟಿಸಿಎಲ್ ನ ಸದರಿ ಕ್ರಮವು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಾಕರರು ಆರೋಪಿಸಿದ್ದಾರೆ.
ಹೈಟೆನ್ಷನ್ ಮಾರ್ಗ ಹಾದು ಹೋಗುವ ಸ್ಥಳದಲ್ಲಿ ಫಲವತ್ತಾದ ಜಮೀನು – ತೋಟವಿದೆ. ಜೊತೆಗೆ ಸಣ್ಣ ಹಿಡುವಳಿ ರೈತರಿದ್ದಾರೆ. ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಮಾರ್ಗದಿಂದ ಅಪಾರ ಪ್ರಮಾಣದ ಜಮೀನು ಹಾನಿಯಾಗಲಿದೆ ಎಂದು ರೈತರು ಆರೋಪಿಸಿದ್ಧಾರೆ.
ಕೇವಲ 4.5 ಕಿ.ಮೀ. ಅಂತರದಲ್ಲಿ ಮಾರ್ಗ ಕೊಂಡೊಯ್ಯುವ ಸಾಧ್ಯತೆಗಳಿವೆ. ಆದರೆ ಕೆಪಿಟಿಸಿಎಲ್ ಸಿದ್ದಪಡಿಸಿರುವ ನೀಲನಕ್ಷೆಯಲ್ಲಿ 23 ಕಿ.ಮೀ. ಉದ್ದದ ಮಾರ್ಗ ಹಾದು ಹೋಗಲಿದೆ. ಇದರಿಂದ ರೈತರಿಗೆ ತೊಂದರೆಯಾಗುವುದಲ್ಲದೆ, ಸರ್ಕಾರಕ್ಕೂ ಆರ್ಥಿಕ ಹೊರೆಯಾಗುತ್ತದೆ ಎಂದು ರೈತರು ದೂರಿದ್ದಾರೆ.
ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಜಮೀನು, ತೋಟಗಳ ಮೂಲಕ ಮಾರ್ಗ ಹಾದು ಹೋಗಲು ಅವಕಾಶ ಕಲ್ಪಿಸುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿ ಮುಖಂಡ ತೀ ನಾ ಶ್ರೀನಿವಾಸ್, ಸೊರಬದ ಮಂಜುನಾಥಗೌಡ, ಸಾಗರದ ದಿನೇಶ್ ಶಿರವಾಳ, ಬಿ ವೈ ರವಿ, ಬೇಗೂರು ರೇವಪ್ಪ, ಶಿವಪ್ಪ, ಉಮೇಶ್ ಪಾಟೀಲ್, ಸುಭಾಷ್ ಚಂದ್ರ ಜೋಗಿಹಳ್ಳಿ, ಮಂಜುನಾಥ್ ಅರೆಕೊಪ್ಪ, ಸತೀಶ್, ಧನಂಜಯ ಮೊದಲಾದವರಿದ್ದರು.
A plan has been made for the construction of high tension power line to the grid of Anjanapura and Koralahalli village through the villages of Shikaripura taluk Eesuru, Chikkajogihalli, Churchigundi. The protesters alleged that the move by KPTCL was unscientific.
There is a fertile land – garden where the high tension line passes. Besides there are small holding farmers. They rely on agriculture for their livelihood. In such a case, the farmers have alleged that a huge amount of land will be damaged by the power line.