
Siganduru bridge | ಅಂತಿಮ ಹಂತದತ್ತ ಸಿಗಂದೂರು ಸೇತುವೆ ಕಾಮಗಾರಿ : ತಡೆಗೋಡೆ ನಿರ್ಮಾಣ ಬಿರುಸು!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಫೆ. 4: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ನಿರ್ಮಾಣ ಮಾಡಲಾಗುತ್ತಿರುವ, ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿದೆ. ಸದ್ಯ ಅಂತಿಮ ಹಂತದ ಕಾಮಗಾರಿಗಳ ನಡೆಯುತ್ತಿವೆ. ಎಲ್ಲ ಅಂದುಕೊಂಡಂತೆ ನಡೆದರೆ, ಮೇ ತಿಂಗಳಲ್ಲಿ ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಮುಕ್ತವಾಗುವ ಸಾಧ್ಯತೆಗಳಿವೆ.
ಪ್ರಸ್ತುತ ಸೇತುವೆಯ ತಡೆಗೋಡೆ ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿದೆ. ಈಗಾಗಲೇ ಸೇತುವೆಯ ಒಂದು ಬದಿ (ಕಳಸವಳ್ಳಿ ಭಾಗ) ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದು ಭಾಗ (ಅಂಬಾರಗೊಡ್ಲು) ದ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
‘ಒಟ್ಟಾರೆ 19 ಫಿಲ್ಲರ್ ನಿರ್ಮಾಣ ಮಾಡಲಾಗಿದೆ. 604 ಸೆಗ್ಮೆಂಟ್ (ಬಾಕ್ಸ್ ಗಾರ್ಡರ್) ಗಳಲ್ಲಿ ಈಗಾಗಲೇ 578 ಸೆಗ್ಮೆಂಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಬಾಕಿ 26 ಸೆಗ್ಮೆಂಟ್ ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.
ಈ ಕೆಲಸಗಳು ಪೂರ್ಣಗೊಂಡ ನಂತರ ಕೇಬಲ್ ಸ್ಟ್ರಚ್ಚಿಂಗ್, ಪೈಂಟಿಂಗ್, ವಿದ್ಯುತ್ ದೀಪಗಳ ಅಳವಡಿಕೆ, ಡಾಂಬರೀಕರಣ ಮತ್ತೀತರ ಅಂತಿಮ ಹಂತದ ಇತರೆ ಕೆಲಸಕಾರ್ಯಗಳು ಆರಂಭವಾಗಲಿವೆ’ ಎಂದು ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ, ಸಿಗಂದೂರು ಸೇತುವೆ ಉಸ್ತುವಾರಿ ಅಧಿಕಾರಿಯಾಗಿರುವ ಪೀರ್ ಪಾಷಾ ಅವರು ಮಾಹಿತಿ ನೀಡುತ್ತಾರೆ.
ಉದ್ಘಾಟನೆ ಯಾವಾಗ? : ಈ ಹಿಂದೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ತಿಳಿಸಿದ್ದಂತೆ, ಬಹುತೇಕ ಮಾರ್ಚ್ – ಏಪ್ರಿಲ್ ವೇಳೆಗೆ ಸೇತುವೆ ಕಾಮಗಾರಿ ಸಂಪೂರ್ಣಗೊಳ್ಳುವುದು ಖಚಿತವಾಗಿದೆ. ಆದರೆ ಮೇ ತಿಂಗಳ ವೇಳೆಗೆ ಅಧಿಕೃತವಾಗಿ ಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.
ದಶಕಗಳ ಬೇಡಿಕೆ : ಸದರಿ ಸೇತುವೆಯು ನಾಡಿನ ಬೆಳಕಿಗಾಗಿ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರು ಭಾಗದ ಜನತೆಯ ಹಲವು ದಶಕಗಳ ಕನಸಾಗಿತ್ತು. ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈ ಭಾಗದ ಸಂಪರ್ಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಸದರಿ ಸೇತುವೆ ನಾಂದಿಯಾಗಲಿದೆ. ಕರಾವಳಿ ಭಾಗದ ಸಂಪರ್ಕ ಸುಲಭ ಸಾಧ್ಯವಾಗಲಿದೆ.
ದಾಖಲೆ : ಸಿಗಂದೂರು ಸೇತುವೆಯ ಒಟ್ಟು ಉದ್ದ 2. 44 ಕಿ.ಮೀ. ಆಗಿದೆ. 16 ಮೀಟರ್ ಅಗಲದ 5 ಸ್ಪಾನ್ ಕೇಬಲ್ ಆಧಾರಿತವಾಗಿದೆ. ದಕ್ಷಿಣ ಭಾರತದಲ್ಲಿ ಕೇಬಲ್ ಆಧಾರಿತವಾಗಿ ನಿರ್ಮಾಣಗೊಂಡಿರುವ ಸೇತುವೆಗಳಲ್ಲಿ, ಮೊದಲ ಅತೀ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿ 2 ನೇ ಅತೀ ದೊಡ್ಡ ಹಾಗೂ ದೇಶದಲ್ಲಿ 7 ನೇ ಸೇತುವೆಯಾಗಲಿದೆ.
ಪ್ರವಾಸೋದ್ಯಮ : ಸಿಗಂದೂರು ಸೇತುವೆಯು ಸಾಗರ, ಸಿಗಂದೂರು, ಕೊಲ್ಲೂರು ಭಾಗದ ಪ್ರವಾಸೋದ್ಯ ಬೆಳವಣಿಗೆಗೂ ಪೂರಕವಾಗಲಿದೆ. ಕೊಲ್ಲೂರು ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ತುಮರಿ, ಬ್ಯಾಕೋಡಿನಂತ ಶರಾವತಿ ಹಿನ್ನೀರ ಗ್ರಾಮಗಳ ಬೆಳವಣಿಗೆಗೆ ಹೊಸ ರಹದಾರಿಯಾಗಲಿದೆ.
ಒಟ್ಟಾರೆ ನಾನಾ ಕಾರಣಗಳಿಂದ, ಸಿಗಂದೂರು ಸೇತುವೆಯು ಇಡೀ ರಾಜ್ಯದ ಗಮನ ತನ್ನತ್ತ ಸೆಳೆದಿದೆ. ಹಾಗೆಯೇ ತನ್ನದೆ ಆದ ಮಹತ್ವ ಪಡೆದುಕೊಂಡಿದ್ದು, ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿ ಉಳಿದುಕೊಳ್ಳಲಿರುವುದಂತೂ ಸತ್ಯವಾಗಿದೆ.
Shimoga, February 4: The Kalasavalli-Ambaragodlu bridge, which is being constructed for the Sharavathi backwaters near the famous religious site Sigandur, is in full swing. At present, the final stage works are going on. If all goes according to plan, it is likely to be officially opened for public service in May.
“A total of 19 fillers have been constructed. Installation of 578 segments out of 604 segments (box guard) has already been completed. Implementation of remaining 26 segments is in progress. After the completion of these works, cable stretching, painting, installation of electric lights, asphalting and other final stage works will begin,” said Peer Pasha, a retired assistant executive engineer and officer-in-charge of Sigandur Bridge.
Sigandur Bridge will also complement the tourism development of Sagar, Sigandur, Kollur area. Kollur connectivity will be closer. Similarly Sharavati will be a new road for the development of backwater villages like Tumari and Bakodi.