POCSO case: BS Yeddyurappa granted anticipatory bail ಪೋಕ್ಸೋ ಪ್ರಕರಣ : ಬಿ ಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು

ಪೋಕ್ಸೋ ಪ್ರಕರಣ : ಬಿ ಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು!

ಬೆಂಗಳೂರು, ಫೆ. 7: ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ, ಧಾರವಾಡ ಹೈಕೋರ್ಟ್ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಫೆ. 7 ರಂದು ತೀರ್ಪು ನೀಡಿದೆ.

ಇದರಿಂದ ಸದ್ಯಕ್ಕೆ ಬಿ ಎಸ್ ಯಡಿಯೂರಪ್ಪ ನಿರಾಳರಾಗಿದ್ದು, ಬಂಧನದ ಭೀತಿಯಿಂದ ಮುಕ್ತರಾಗಿದ್ದಾರೆ. ಆದರೆ ವಿಚಾರಣಾ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಯಲಿದೆ.

ಬಿ ಎಸ್ ವೈ ಅವರು ಪ್ರಕರಣ ರದ್ದು ಪಡಿಸುವಂತೆ ಕೋರಿ ಹಾಗೂ ನಿರೀಕ್ಷಣಾ ಜಾಮೀನು ಮಂಜೂರು ಕೋರಿ, ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದರಿ ಪ್ರಕರಣದ ಕಾಗ್ನಿಜೆನ್ಸ್ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಹೊಸದಾಗಿ ಪ್ರಕರಣದ ಕಾಗ್ನಿಜೆನ್ಸ್ ಪಡೆಯಲು ಸೂಚನೆ ನೀಡಿದೆ. ಹೈಕೋರ್ಟ್ ಈ ಪ್ರಕರಣವನ್ನು ಪೋಕ್ಸೊ ವಿಶೇಷ ಕೋರ್ಟ್ ಗೆ  ಮರಳಿಸಿದೆ. ಸಮನ್ಸ್ ಜಾರಿ ಬಗ್ಗೆ ಹೊಸದಾಗಿ ತೀರ್ಮಾನಿಸಲು ಪೋಕ್ಸೋ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚಿಸಿದೆ.

ಪ್ರಕರಣದ ಹಿನ್ನೆಲೆ : 2024 ರ ಫೆಬ್ರವರಿ 2 ರಂದು ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ, ಯಡಿಯೂರಪ್ಪ ಅವರು ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೋರ್ವರು ದೂರು ನೀಡಿದ್ದರು.

ಈ ಸಂಬಂಧ ಯಡಿಯೂರಪ್ಪ ವಿರುದ್ದ ಬೆಂಗಳೂರಿನ ಸದಾಶಿವ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

POCSO case: BS Yeddyurappa granted anticipatory bail – Bengaluru, Feb 7: The Dharwad High Court bench granted anticipatory bail to former Chief Minister BS Yeddyurappa in the POCSO case on Feb 7.

Former Minister Kumar Bangarappa participated in Mahakumbha mela shimoga | ಮಹಾಕುಂಭ ಮೇಳದಲ್ಲಿ ಭಾಗಿಯಾದ ಮಾಜಿ ಸಚಿವ ಕುಮಾರ್ ಬಂಗಾರಪ್ಪ Previous post maha kumbh 2025 | ಮಹಾಕುಂಭ ಮೇಳದಲ್ಲಿ ಭಾಗಿಯಾದ ಮಾಜಿ ಸಚಿವ ಕುಮಾರ್ ಬಂಗಾರಪ್ಪ
shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Next post shimoga | ಶಿವಮೊಗ್ಗ : ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ – ಫೆ. 8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ