
shimoga : ಶಿವಮೊಗ್ಗ : ಬಲೆಗೆ ಸಿಲುಕಿ ಸಂಕಷ್ಟದಲ್ಲಿದ್ದ ನಾಗರಹಾವಿನ ಸಂರಕ್ಷಣೆ!
ಶಿವಮೊಗ್ಗ (shivamogga), ಫೆ. 7: ಮನೆ ಮುಂಭಾಗದ ಹೂವಿನ ಗಿಡಗಳ ಬೇಲಿಗೆ ರಕ್ಷಣೆಗೆಂದು ಹಾಕಿದ್ದ ಮೀನಿನ ಬಲೆಗೆ ನಾಗರಹಾವೊಂದು ಸಿಲುಕಿ ಬಿದ್ದ ಘಟನೆ, ಫೆ. 7 ರಂದು ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ.
ನಾಗೇಂದ್ರ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹೂವಿನ ಗಿಡಗಳ ರಕ್ಷಣೆಗೆಂದು ಬೇಲಿಯ ಸುತ್ತಲೂ ಬಲೆ ಹಾಕಲಾಗಿತ್ತು. ಆಕಸ್ಮಿಕವಾಗಿ ಸದರಿ ಬಲೆಗೆ ಬೃಹದಾಕಾರದ ನಾಗರಹಾವು ಹಾವು ಸಿಲುಕಿ ಬಿದ್ದಿದೆ.
ಬಲೆಯಲ್ಲಿ ಹಾವು ಸಿಲುಕಿ ಬಿದ್ದು ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಕುಟುಂಬದವರು, ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ‘ಕತ್ತರಿಯ ಸಹಾಯದಿಂದ ಬಲೆ ಕತ್ತರಿಸಿ, ಸುಮಾರು 4 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shimoga, Feb 7: A cobra got caught in a fish net that was placed on the fence of the flower plants in front of the house, and the incident took place on February 7 in Gondichatnalli on the outskirts of Shimoga city.
After reaching the spot, Kiran operated for more than half an hour. “With the help of scissors, the net was cut and the cobra, about 4 feet long, was safely preserved,” Snake Kiran said in a press release.

More Stories
shimoga crime news | ಶಿವಮೊಗ್ಗ : ವಾಟ್ಸಾಪ್ ಗೆ ಬಂದ ಸೈಬರ್ ವಂಚಕರ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!
Shivamogga: A person lost lakhs of rupees after believing a message from a cyber fraudster on WhatsApp!
ಶಿವಮೊಗ್ಗ : ವಾಟ್ಸಾಪ್ ಗೆ ಬಂದ ಸೈಬರ್ ವಂಚಕರ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 9 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for July 9 in Shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 9 ರ ತರಕಾರಿ ಬೆಲೆಗಳ ವಿವರ
shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
Shivamogga : Jewellery and cash worth lakhs stolen from house in broad daylight
ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
shimoga outer ring road | ಶಿವಮೊಗ್ಗ ನಗರದ ಮೊದಲ ಹಂತದ ಹೊರ ವರ್ತುಲ ರಸ್ತೆ ನಿರ್ಮಾಣ ಅಂತಿಮ ಘಟ್ಟಕ್ಕೆ!
The construction work of the first phase of the outer ring road of Shivamogga city has reached the final stage!
ಶಿವಮೊಗ್ಗ ನಗರದ ಮೊದಲ ಹಂತದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for July 8 in Shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ
shimoga | ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಥಳಿತಕ್ಕೊಳಗಾದ ಮಹಿಳೆ ಸಾ**ವು!
Holehonnuru | Woman dies after being beaten up for allegedly being possessed by a demon!
ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆ ಸಾವು!