
delhi election result | ದೆಹಲಿಯಲ್ಲಿ ಬಿಜೆಪಿ ಸರ್ಕಾರ : ಅಧಿಕಾರ ಕಳೆದುಕೊಂಡ ಎಎಪಿ – ಕಾಂಗ್ರೆಸ್ ಶೂನ್ಯ!
ದೆಹಲಿ (delhi), ಫೆ. 8: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆ. 5 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಫೆ. 8 ರಂದು ನಡೆಯಿತು. ಸ್ಪಷ್ಟ ಬಹುಮತದೊಂದಿಗೆ, 27 ವರ್ಷಗಳ ಬಳಿಕ ಬಿಜೆಪಿ ಪಕ್ಷ ದೆಹಲಿ ಅಧಿಕಾರದ ಗದ್ದುಗೆಯೇರುವತ್ತ ದಾಪುಗಾಲಿಟ್ಟಿದೆ.
ಕಳೆದೊಂದು ದಶಕದಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದ, ಆಮ್ ಆದ್ಮಿ ಪಾರ್ಟಿ (ಎಎಪಿ) ಅಧಿಕಾರ ಕಳೆದುಕೊಂಡಿದೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿದ್ದು, ಹೀನಾಯವಾಗಿ ಪರಾಭವಗೊಂಡಿದೆ!
ಸದ್ಯದ ಚುನಾವಣಾ ಆಯೋಗದ ಮಾಹಿತಿ ಅನುಸಾರ 70 ಕ್ಷೇತ್ರಗಳಲ್ಲಿ 48 ರಲ್ಲಿ ಬಿಜೆಪಿ ಹಾಗೂ 22 ರಲ್ಲಿ ಎಎಪಿ ಮುನ್ನಡೆ ಕಾಯ್ದುಕೊಂಡಿದೆ. 2020 ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳಲ್ಲಿ, ಬಿಜೆಪಿ 8 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷ ಒಂದೂ ಸ್ಥಾನದಲ್ಲಿ ಜಯ ಸಂಪಾದಿಸಲು ಸಾಧ್ಯವಾಗಿರಲಿಲ್ಲ.
ಪರಾಭವ : ಎಎಪಿಗೆ ಪಕ್ಷದ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಅಭ್ಯರ್ಥಿ ಎದುರು ಪರಾಭಗೊಂಡಿದ್ದಾರೆ. ಇದು ಎಎಪಿ ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಆಘಾತ ಉಂಟು ಮಾಡಿದೆ.
ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೇಜ್ರಿವಾಲ್ ಅವರು ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಾಹೇಬ್ ಸಿಂಗ್ ಎದುರು 4089 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಹಾಗೆಯೇ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೂ ಸೋಲಾಗಿದೆ.
Delhi, Feb 8: The counting of votes for the 70 constituencies of the Delhi Assembly held on February 5 took place on February 8. With a clear majority, after 27 years, the BJP party is on the verge of coming to power in Delhi.
The Aam Aadmi Party (AAP), which ruled Delhi for the past decade, has lost power. It is like sitting in the opposition party. On the other hand, the Congress party made zero gains and lost miserably!