shimoga | Shimoga: Allegation of lake encroachment in Gadikoppa - Deputy Lokayukta filed a voluntary complaint! shimoga | ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಕೆರೆ ಒತ್ತುವರಿ ಆರೋಪ - ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು!

shimoga | ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಕೆರೆ ಒತ್ತುವರಿ ಆರೋಪ – ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು!

ಶಿವಮೊಗ್ಗ, ಫೆ. 8: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದಲ್ಲಿ, ಸಿಟಿ ಕ್ಲಬ್ ಕಟ್ಟಡವಿರುವ ಕೆರೆ ಜಾಗವೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಕೆರೆ ಜಾಗ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಸಂಸ್ಥೆಯು ಸ್ವಯಂ ಪ್ರೇರಿತ (ಸುಮೋಟೋ) ದೂರು ದಾಖಲಿಸಿಕೊಂಡಿದೆ. ತನಿಖೆಗೆ ಆದೇಶಿಸಿದೆ!

ಉಪ ಲೋಕಾಯುಕ್ತ -1 ನ್ಯಾಯಾಧೀಶರಾದ ಕೆ ಎನ್ ಫಣೀಂದ್ರ ಅವರ ಆದೇಶದ ಮೇರೆಗೆ, ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಇದು ಶಿವಮೊಗ್ಗ ನಗರದ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬಹುತೇಕ ಜೀವ ಕಳೆದುಕೊಂಡಿದ್ದ ಕೆರೆ ಜಾಗ ವಿವಾದವೀಗ, ಲೋಕಾಯುಕ್ತ ಸಂಸ್ಥೆಯ ಮಧ್ಯಪ್ರವೇಶದಿಂದ ಮತ್ತೆ ಜೀವ ಬರುವಂತಾಗಿದೆ.

ಆದೇಶವೇನು? : ಗಾಡಿಕೊಪ್ಪದ ಸರ್ವೇ ನಂಬರ್ 15 ರಲ್ಲಿ 3 ಎಕರೆ 12 ಗುಂಟೆ ಕೆರೆ ಜಾಗವಿದೆ. ಸದರಿ ಕೆರೆ ಕಣ್ಮರೆಯಾಗಿರುವ ಕುರಿತಂತೆ ಹಾಗೂ ಒತ್ತುವರಿಯಾಗುತ್ತಿರುವ ಬಗ್ಗೆ, ಶಿವಮೊಗ್ಗದಿಂದ ಪ್ರಕಟವಾಗುವ ‘ನ್ಯೂಸ್ ವಾರಿಯರ್ಸ್’ ಪತ್ರಿಕೆ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿಯ ವರದಿ ಪ್ರಕಟಿಸಿತ್ತು.

ಕೆರೆಯ 2 ಎಕರೆ ಜಾಗವನ್ನು, ಸಿಟಿ ಕ್ಲಬ್ ಗೆ 30 ವರ್ಷಗಳ ಕಾಲ ವಾರ್ಷಿಕ ತಲಾ 2 ಸಾವಿರ ರೂ. ದರದಂತೆ ಜಿಲ್ಲಾಡಳಿತ ಗುತ್ತಿಗೆ ಆಧಾರದ ಮೇಲೆ ನೀಡಿದೆ. ಉಳಿದ 1 ಎಕರೆ 12 ಗುಂಟೆ ಜಾಗವಿದೆ. ಮತ್ತೊಂದೆಡೆ, ಕೆರೆ ಜಾಗದಲ್ಲಿಯೇ ಬಹುಮಹಡಿ ಕಟ್ಟಡವೊಂದು ನಿರ್ಮಿಸಲಾಗುತ್ತಿದೆ ಎಂದು ಪತ್ರಿಕೆಯು ವರದಿ ಮಾಡಿತ್ತು. 

ಪತ್ರಿಕೆಯ ವರದಿ ಗಮನಿಸಿದ ಉಪ ಲೋಕಾಯುಕ್ತ – 1 ನ್ಯಾಯಾಧೀಶರಾದ ಕೆ ಎನ್ ಫಣೀಂದ್ರ ಅವರು, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಸೆಕ್ಷನ್ 7 (2) ಮತ್ತು 9 (3) (ಎ) ರ ಅನ್ವಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಜೊತೆಗೆ ಈ ಸಂಬಂಧ ಶಿವಮೊಗ್ಗ ಉಪ ವಿಭಾಗದ ಸಹಾಯಕ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ತಾಲೂಕು ಪಂಚಾಯ್ತಿ ಇಓ, ಮಹಾನಗರ ಪಾಲಿಕೆ ಎಇಇ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.

ಕೆರೆ ಜಾಗ ಒತ್ತುವರಿ ಆರೋಪದ ಕುರಿತಂತೆ ನಾಲ್ಕು ವಾರದೊಳಗೆ ಪರಿಶೀಲನೆ ನಡೆಸಿ ಕೈಗೊಂಡ ಕ್ರಮಗಳ ಕುರಿತಂತೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಉಪ ಲೋಕಾಯುಕ್ತರು ಆದೇಶಿಸಿದ್ದಾರೆ.

ಶಿವಮೊಗ್ಗ ಲೋಕಾಯುಕ್ತ ಅಧೀಕ್ಷಕರು ಎರಡು ವಾರದೊಳಗೆ, ತಹಶೀಲ್ದಾರ್ ಹಾಗೂ ಎಡಿಎಲ್ಆರ್ ಅವರೊಂದಿಗೆ ಸ್ಥಳ ಪರಿಶೀಲಿಸಬೇಕು. ಕೆರೆ ಜಾಗ ಒತ್ತುವರಿಯಾಗಿದೆಯೇ? ಒತ್ತುವರಿಯಾಗಿದ್ದರೆ, ಸಂಬಂಧಿಸಿದ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಸದರಿ ಪ್ರಕರಣದ ಕುರಿತಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರುವಂತೆ ಆದೇಶದಲ್ಲಿ ಉಪ ಲೋಕಾಯುಕ್ತ – 1 ನ್ಯಾಯಾಧೀಶರಾದ ಕೆ ಎನ್ ಫಣೀಂದ್ರ ಅವರು ಸೂಚಿಸಿದ್ದಾರೆ.

Shimoga, Feb 8: In Gadikoppa on the outskirts of Shimoga city, the lake where the City Club building is located has again come to the fore of discussion. Regarding the allegation of lake land encroachment, the Lokayukta organization filed a suo motu complaint. Ordered an investigation!

On the order of deputy lokayukta-1 Justice k n phaneendra, a suo motu complaint was filed in the Lokayukta. This has created a huge stir in the administrative sector of Shimoga city. After the dispute over the lake area, which had almost lost its life, it has come back to life with the intervention of Lokayukta organization.

Delhi, Feb 8: For 70 constituencies of Delhi Assembly on Feb. The counting of votes for the election held on 5th was held on 8th February. With a clear majority, after 27 years, the BJP party is on its way to power in Delhi. Previous post delhi election result | ದೆಹಲಿಯಲ್ಲಿ ಬಿಜೆಪಿ ಸರ್ಕಾರ : ಅಧಿಕಾರ ಕಳೆದುಕೊಂಡ ಎಎಪಿ – ಕಾಂಗ್ರೆಸ್ ಶೂನ್ಯ!
shimoga | State budget: What are the expectations of Shimoga district? shimoga | ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು? Next post shimoga | ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು?