ಜ.6 ರಿಂದ 3000 ಹಳ್ಳಿ ಮಕ್ಕಳಿಗೆ ನೋಟ್ ಬುಕ್ ವಿತರಣೆ!

ಶಿವಮೊಗ್ಗ, ಜ.4: ಬೆಂಗಳೂರಿನ ಉದ್ಯಮಿ ಆರ್.ಚಂದ್ರು ಅವರು, ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 3000 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ ಜ. 6 ರಂದು ಹಮ್ಮಿಕೊಂಡಿದ್ದಾರೆ.

ಮೂಲತಃ ಕುಂಸಿ ಗ್ರಾಮದವರಾದ ಆರ್.ಚಂದ್ರು ಅವರು ಕಳೆದ 17 ವರ್ಷಗಳಿಂದ ಕುಂಸಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿಕೊಂಡು ಬರುತ್ತಿದ್ದಾರೆ.

ಪ್ರಸ್ತುತ ವರ್ಷ ಕೂಡ ನೋಟ್ ಬುಕ್ ವಿತರಣೆ ಮಾಡುತ್ತಿದ್ದಾರೆ. ಕುಂಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜ. 6 ರಂದು ನೋಟ್ ಬುಕ್ ವಿತರಣೆಗೆ ಚಾ;ಲನೆ ನೀಡಲಿದ್ದಾರೆ ಎಂದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗೇಶ್ ಅವರು ತಿಳಿಸಿದ್ದಾರೆ.

Previous post ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪರಿಗೆ ನಾಗರೀಕರಿಂದ ಅದ್ಧೂರಿ ಸನ್ಮಾನ!
Next post ಹಿರಿಯ ಅರ್ಚಕ ಹೆಚ್.ಎಸ್.ತಿಪ್ಪಾಶಾಸ್ತ್ರೀ ವಿಧಿವಶ