shimoga | Illegal usury business: Police raid on 9 places – Lakhs of Rs. Capture! shimoga | ಕಾನೂನುಬಾಹಿರ ಬಡ್ಡಿ ವ್ಯವಹಾರ : 9 ಕಡೆ ಪೊಲೀಸ್ ರೈಡ್ – ಲಕ್ಷಾಂತರ ರೂ. ವಶ!

shimoga | ಕಾನೂನುಬಾಹಿರ ಬಡ್ಡಿ ವ್ಯವಹಾರ : 9 ಕಡೆ ಪೊಲೀಸ್ ರೈಡ್ – ಲಕ್ಷಾಂತರ ರೂ. ವಶ!

ಶಿವಮೊಗ್ಗ (shivamogga), ಫೆ. 11: ಕಾನೂನುಬಾಹಿರವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವ ಆರೋಪದ ಮೇಲೆ, ಶಿವಮೊಗ್ಗ ನಗರದ ವಿವಿಧೆಡೆ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ಮನೆಗಳ ಮೇಲೆ, ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ಘಟನೆ ಫೆ. 11 ರಂದು ಬೆಳಿಗ್ಗೆ ನಡೆದಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟಾರೆ 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 39 ಲಕ್ಷ ನಗದು, 24 ಮೊಬೈಲ್ ಪೋನ್, 2 ಲ್ಯಾಪ್’ಟ್ಯಾಪ್, 72 ಚಕ್ ಗಳು,

19 ಆರ್.ಸಿ. ಬುಕ್ ಗಳು, 7 ವೆಹಿಕಲ್ ಬಾಂಡ್, 2 ಫಾರಂ ನಂಬರ್ 29 – 30 ಮತ್ತು ಅಗ್ರಿಮೆಂಟ್ ಪ್ರತಿ, ಪಾಸ್ ಬುಕ್, ಸೇಲ್ ಡೀಡ್, ಪಹಣಿ, 29 ಬೈಕ್ ಗಳು ಮತ್ತು 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

9 ಆರೋಪಿಗಳ ವಿರುದ್ದ 9 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ದಾಳಿ ನಡೆದಿದ್ದು ಎಲ್ಲೆಲ್ಲಿ? : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ, ಮಾರ್ನಾಮಿ ಬೈಲು, ಕಾಮಾಕ್ಷಿ ಬೀದಿಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಉಳಿದಂತೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರ, ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶೀಪುರ,

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಗುಡಿ, ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ ಹಾಗೂ ಚಾಲುಕ್ಯನಗರ, ಗ್ರಾಮಾಂತರ ಠಾಣೆ ವ್ಯಾಪ್ತಿಯ ಇಂದಿರಾನಗರ ಹಾಗೂ ಗುರುಪುರದಲ್ಲಿರುವ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎ ಜಿ ಕಾರ್ಯಪ್ಪ, ಡಿವೈಎಸ್ಪಿಗಳಾದ ಬಾಬು ಆಂಜನಪ್ಪ, ಸಂಜೀವ್ ಕುಮಾರ್, ಕೃಷ್ಣಮೂರ್ತಿರವರ ಮಾರ್ಗದರ್ಶನದಲ್ಲಿ

ಇನ್ಸ್’ಪೆಕ್ಟರ್ ಗಳಾದ ರವಿ ಪಾಟೀಲ್, ಹರೀಶ್ ಪಾಟೀಲ್, ಸಿದ್ದೇಗೌಡ, ಚಂದ್ರಕಲಾ, ಕೆ ಟಿ ಗುರುರಾಜ್, ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Shimoga February 11: On the morning of February 11, the police suddenly raided the houses of those doing interest business in various parts of Shimoga city on the charge of illegal usury business.

Houses in Annanagar, Marnami Bailu, Kamakshi Street under Doddapet Police Station were raided. Elsewhere, Vidyanagar under Kote Police Station, Kashipura under Vinobanagar Police Station,

Basavanagudi under Jayanagar police station, Gopishettikoppa and Chalukyanagar under Tunganagar police station, Indiranagar and Gurupura under rural police station were raided on the houses of those who were running illegal usury business.

shimoga | Power outage in various parts of Shivamogga city on March 12! shimoga | ಶಿವಮೊಗ್ಗ ನಗರದ ವಿವಿಧೆಡೆ ಮಾ.12 ರಂದು ವಿದ್ಯುತ್ ವ್ಯತ್ಯಯ! Previous post shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ – ಫೆ. 11 ರಂದು ವಿದ್ಯುತ್ ವ್ಯತ್ಯಯ
shimoga | Treat every child marriage case as a 'hot spot: Shimoga DC instructs officials shimoga | ಪ್ರತಿ ಬಾಲ್ಯ ವಿವಾಹ ಪ್ರಕರಣವನ್ನು ‘ಹಾಟ್‌ ಸ್ಟಾಟ್’ ಎಂದು ಪರಿಗಣಿಸಿ : ಅಧಿಕಾರಿಗಳಿಗೆ ಶಿವಮೊಗ್ಗ ಡಿಸಿ ಸೂಚನೆ Next post shimoga | ಪ್ರತಿ ಬಾಲ್ಯ ವಿವಾಹ ಪ್ರಕರಣವನ್ನು ‘ಹಾಟ್‌ ಸ್ಟಾಟ್’ ಎಂದು ಪರಿಗಣಿಸಿ : ಅಧಿಕಾರಿಗಳಿಗೆ ಶಿವಮೊಗ್ಗ ಡಿಸಿ ಸೂಚನೆ