bhadravati | Holehonur police operation: Accused involved in peanut theft arrested! bhadravati | ಹೊಳೆಹೊನ್ನೂರು ಪೊಲೀಸರ ಕಾರ್ಯಾಚರಣೆ : ಅಡಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ!

bhadravati | ಹೊಳೆಹೊನ್ನೂರು ಪೊಲೀಸರ ಕಾರ್ಯಾಚರಣೆ : ಅಡಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ!

ಭದ್ರಾವತಿ (bhadravati), ಫೆ. 13: ಅಡಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕು ಆಯನೂರಿನ ಕೋಹಳ್ಳಿ ನಿವಾಸಿ ಸೈಯದ್ ನವೀದ್ (29) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯ ಬಂಧನದಿಂದ 2024 ನೇ ಸಾಲಿನಲ್ಲಿ ನಡೆದಿದ್ದ ಒಂದು ಹಾಗೂ 2025 ನೇ ಸಾಲಿನಲ್ಲಿ ನಡೆದಿದ್ದ ಎರಡು ಸೇರಿದಂತೆ ಒಟ್ಟಾರೆ ನಾಲ್ಕು ಅಡಕೆ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ 10 ಕ್ವಿಂಟಾಲ್ ಒಣ ಅಡಕೆ, ಕೃತ್ಯಕ್ಕೆ ಉಪಯೋಗಿಸಿದ 4 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ ಒಟ್ಟಾರೆ 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಡಿವೈಎಸ್ಪಿ ನಾಗರಾಜ್ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಠಾಣೆ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ರಮೇಶ್, ಮಂಜುನಾಥ್ ಎಸ್ ಕುರಿ, ಕೃಷ್ಣನಾಯ್ಕ್, ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಕಾಶ್ ನಾಯ್ಕ್, ಪ್ರಸನ್ನ, ಸವಿತ, ವಿಶ್ವನಾಥ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

Bhadravati Feb 13: On the charge of being involved in peanut theft, the Bhadravati taluk Holehonnur police station arrested an accused. Syed Naveed (29), a resident of Kohalli in Shimoga taluk Ayanur, has been identified as the arrested accused. According to the announcement released by the police department, since the arrest of the accused, a total of four cases of coconut theft, including one in 2024 and two in 2025, have come to light.

Under the supervision of DySP Nagaraj, Holehonur police station inspector Lakshmipati, sub-inspectors Ramesh, Manjunath S Kuri, Krishna Naik, staff members Annappa, Prakash Naik, Prasanna, Savitha, Vishwanath have succeeded in arresting the accused.

shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Previous post shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ?
sagar | ಸಾಗರ : ದೇವರ ಮಾಂಗಲ್ಯ ಸರ ಕದ್ದವ ಕೊನೆಗೂ ಸಿಕ್ಕಿಬಿದ್ದ! Sagara: The accused who stole from the temple was arrested! Next post sagar | ಸಾಗರ : ದೇವರ ಮಾಂಗಲ್ಯ ಸರ ಕದ್ದವ ಕೊನೆಗೂ ಸಿಕ್ಕಿಬಿದ್ದ!