shimoga kumbh mela train | Train from Shimoga to Prayagraj Kumbh Mela – Timetable complete details of stops shimoga kumbh mela train | ಪ್ರಯಾಗ್’ರಾಜ್ ಕುಂಭಮೇಳಕ್ಕೆ ಶಿವಮೊಗ್ಗದಿಂದ ರೈಲು – ವೇಳಾಪಟ್ಟಿ, ನಿಲ್ದಾಣಗಳ ಕಂಪ್ಲೀಟ್ ಡೀಟೈಲ್ಸ್

shimoga | kumbh mela train | ಪ್ರಯಾಗ್’ರಾಜ್ ಕುಂಭಮೇಳಕ್ಕೆ ಶಿವಮೊಗ್ಗದಿಂದ ರೈಲು – ವೇಳಾಪಟ್ಟಿ, ನಿಲ್ದಾಣಗಳ ಕಂಪ್ಲೀಟ್ ಡೀಟೈಲ್ಸ್…

ಶಿವಮೊಗ್ಗ (shivamogga), ಫೆ. 17: ಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿಯು, ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್  ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ಈ ಕುರಿತಂತೆ ಫೆ. 17 ರಂದು ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.  ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್ – ಬನಾರಸ್ ವಿಶೇಷ ಎಕ್ಸ್ ಪ್ರೆಸ್  ರೈಲು, ಶಿವಮೊಗ್ಗ ಟೌನ್ ನಿಂದ ಫೆಬ್ರವರಿ 22, 2025 ರಂದು ಸಂಜೆ 4:40 ಕ್ಕೆ ಹೊರಡಲಿದೆ.  ಫೆಬ್ರವರಿ 24, 2025 ರಂದು ಮಧ್ಯಾಹ್ನ 3:00 ಗಂಟೆಗೆ ಬನಾರಸ್ ತಲುಪಲಿದೆ.

ಹಿಂತಿರುಗುವ ಪ್ರಯಾಣ, ರೈಲು ಸಂಖ್ಯೆ 06224 ಬನಾರಸ್ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್ ಪ್ರೆಸ್ ರೈಲು ಬನಾರಸ್ ನಿಂದ ಫೆಬ್ರವರಿ 25, 2025 ರಂದು ಬೆಳಗಿನ ಜಾವ 1:30 ಕ್ಕೆ ಹೊರಟು, ಫೆಬ್ರವರಿ 27, 2025 ರಂದು ಬೆಳಿಗ್ಗೆ 6:45 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ರೈಲು  ಎರಡೂ ಮಾರ್ಗಗಳಲ್ಲಿ ಭದ್ರಾವತಿ, ಬಿರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ಹೊಸಪೇಟೆ, ಕೊಪ್ಪಳ, ಗದಗ, ಹೋಳೆ ಆಲೂರು,

ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್, ಸೋಲಾಪುರ, ದೌಂಡ್, ಕೊಪರಗಾಂವ್, ಮನ್ಮಾಡ್, ಭುಸಾವಲ್, ಇಟಾರ್ಸಿ, ಪಿಪರಿಯಾ,

ನರಸಿಂಗ್ಪುರ್, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ ರಾಜ್ ಚಿಯೋಕಿ ಮತ್ತು ಮಿರ್ಜಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ವಿಶೇಷ ರೈಲುಗಳು ಹನ್ನೊಂದು ಎಸಿ  ತ್ರಿ-ಟೈರ್ ಬೋಗಿಗಳು, ನಾಲ್ಕು ಸ್ಲೀಪರ್ ಕ್ಲಾಸ್ ಬೋಗಿಗಳು, ಎರಡು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಲಗೇಜ್/ಜನರೇಟರ್/ಬ್ರೇಕ್ ವ್ಯಾಗನಗಳನ್ನು ಒಳಗೊಂಡಿರುತ್ತವೆ.

ಈ ರೈಲುಗಳ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಗಳ  ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

Shimoga, Feb 17: Running of Special Trains Between Shivamogga Town and Banaras for Kumbh Mela.The Railway Board has decided to run special express trains between Shivamogga Town and Banaras for one trip in each direction to manage the extra rush of passengers during the ongoing Kumbh Mela.

Train No. 06223 Shivamogga Town – Banaras Express Special will depart from Shivamogga Town at 4:40 p.m. on February 22, 2025 and will reach Banaras at 3:00 p.m. on February 24, 2025. In the return direction, Train No. 06224 Banaras – Shivamogga Town Express Special will depart from Banaras at 1:30 a.m. on February 25, 2025 and will arrive at Shivamogga Town at 6:45 a.m. on February 27, 2025.

En route, the train will have stoppages at Bhadravati, Birur, Chikjajur, Chitradurga, Rayadurg, Ballari Cantt., Hosapete, Koppal, Gadag, Hole Alur, Badami, Bagalkot, Almatti, Basavana Bagewadi Road, Vijayapura, Indi Road, Solapur, Daund, Kopargaon, Manmad, Bhusaval, Itarsi, Pipariya, Narsinghpur, Jabalpur, Katni, Maihar, Satna, Manikpur, Prayagraj Chheoki and Mirzapur stations in both directions.

The special trains will consist of eleven 2AC Three-Tier Coaches, four Sleeper Class Coaches, two General Second-Class Coaches and two Luggage/Generator/Brake Vans. For additional information about train schedules and ticket bookings, passengers can visit the official Indian Railways website or call the helpline number 139.

Dr. Manjunath Kanamadi, Chief Public Relations Officer, South Western Railway, Hubballi

Shimoga: District highway is dangerous for school children – PWD traffic police to pay attention? shimoga : ಶಿವಮೊಗ್ಗ : ಶಾಲಾ ಮಕ್ಕಳಿಗೆ ಅಪಾಯಕಾರಿ ಜಿಲ್ಲಾ ಹೆದ್ಧಾರಿ – ಗಮನಹರಿಸುವರೆ ಪಿಡಬ್ಲ್ಯೂಡಿ ಟ್ರಾಫಿಕ್ ಪೊಲೀಸರು? Previous post shimoga | ಶಿವಮೊಗ್ಗ : ಶಾಲಾ ಮಕ್ಕಳಿಗೆ ಅಪಾಯಕಾರಿಯಾದ  ಹೆದ್ಧಾರಿಗಳು – ಗಮನಹರಿಸುವರೆ ಪಿಡಬ್ಲ್ಯೂಡಿ, ಟ್ರಾಫಿಕ್ ಪೊಲೀಸರು?
bengaluru | Bangalore | Grilahakshmi Annabhagya money release delayed: What did the CM say? bengaluru | ಬೆಂಗಳೂರು | ಗೃಹಲಕ್ಷ್ಮೀ ಅನ್ನಭಾಗ್ಯ ಹಣ ಬಿಡುಗಡೆ ವಿಳಂಬ : ಸಿಎಂ ಹೇಳಿದ್ದೇನು? Next post bengaluru | ಬೆಂಗಳೂರು | ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಬಿಡುಗಡೆ ವಿಳಂಬ : ಸಿಎಂ ಹೇಳಿದ್ದೇನು?