bengaluru | e - khata confusion : CM's strict instructions to officials! bengaluru | ಇ – ಖಾತಾ ಗೊಂದಲ : ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ!

bengaluru | ಇ – ಖಾತಾ ಗೊಂದಲ : ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ!

ಬೆಂಗಳೂರು, ಫೆ. 18: ನಗರ – ಪಟ್ಟಣ ಪ್ರದೇಶಗಳಲ್ಲಿನ ಸ್ಥಿರಾಸ್ತಿಗಳಿಗೆ ಇ-ಖಾತಾ ಹಾಗೂ ಬಿ – ಖಾತಾ ನೀಡುವ ಕುರಿತಂತೆ, ಫೆ. 18 ರಂದು ಸಿಎಂ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು.

‘ಇಂದಿನಿಂದಲೇ ಬಿ – ಖಾತಾ ಕೊಡಲು ಪ್ರಾರಂಭಿಸಬೇಕು. ಅನದಿಕೃತ, ರೆವಿನ್ಯೂ ಬಡಾವಣೆಗಳಲ್ಲಿನ ನಿವೇಶನ, ಮನೆ ಹೊಂದಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒನ್ ಟೈಮ್ ಸೆಲ್ಯೂಷನ್ ಕೊಟ್ಟಿದ್ದೆವೆ. 3 ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಗೊಂದಲಗಳಿಗೆ ಅಂತ್ಯ ಹಾಡಬೇಕು’ ಎಂದು ಸಿಎಂ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ತಾವು ಹಾಗೂ ಸಂಬಂಧಪಟ್ಟ ಎಲ್ಲ ಸಚಿವರುಗಳು ಸ್ಪಷ್ಟಪಡಿಸಿದ್ದೆವೆ. ಹೊಸ ಗೊಂದಲಗಳಿಗೆ ಅವಕಾಶವಾಗಬಾರದು. ರಾಜ್ಯದಲ್ಲಿ ಇನ್ನೆಲ್ಲೂ ಅನದಿಕೃತ ಹಾಗೂ ರೆವಿನ್ಯೂ ಬಡಾವಣೆಗಳು ತಲೆಎತ್ತಬಾರದು ಎಂದು ಸೂಚಿಸಿದ್ದಾರೆ.

ಅನದಿಕೃತ ಬಡಾವಣೆಗಳು ನಗರ – ಪಟ್ಟಣ ಪ್ರದೇಶಗಳು ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಇವೆ. ಇನ್ನು ಮುಂದೆ ಅನದಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಕಾಯ್ದೆಯ ಮೂಲಕ ಅನದಿಕೃತ ಬಡಾವಣೆಗಳಿಗೆ ಅಂತ್ಯ ಹಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅನದಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ. ಪರಿಣಾಮ ಜನರಿಗೆ ನಾಗರೀಕ ಸೌಲಭ್ಯಗಳು ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲ ಸಮಸ್ಯೆಗಳಾಗಿವೆ. ಒಂದು ಬಾರಿ ಬಿ ಖಾತಾ ಕೊಟ್ಟು ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದರು.

ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ. ಅಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಬೇಕು. ಇದರಲ್ಲಿ ಯಾವುದೇ ರಾಜೀ ಇಲ್ಲ. ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅನದಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿಗಳು, ಮುಖ್ಯ ಯೋಜನಾ ಅಧಿಕಾರಿಗಳು ಹೊಣೆ ಮಾಡಲಾಗುವುದು. ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಮಧ್ಯವರ್ತಿಗಳಿಗೆ ತಕ್ಷಣವೇ ಗೇಟ್ ಪಾಸ್ ಕೊಡಬೇಕು. ರಾಜ್ಯದಲ್ಲಿ ಇನ್ನೆಲ್ಲೂ ಅನದಿಕೃತ, ರೆವಿನ್ಯೂ ಬಡಾವಣೆಗಳು ತಲೆಎತ್ತಬಾರದು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Bengaluru, Feb 18: Regarding issuance of E-Khata and B-Khata for immovable properties in city-town areas, Feb. On 18th, CM Siddaramaiah held a video conference with District Collectors, Planning Directors, Commissioners of Urban Local Bodies including Metropolitan Corporation.

You should start giving B-Katha from today. Plots in unclaimed, revenue estates should not be a problem for home owners. We have given a one time solution to benefit the poor and middle class. The CM instructed that everyone should be given accounts in 3 months and end the confusion.

shimoga | Shimoga: Job fair on February 24 - More than 50 reputed companies participated shimoga | ಶಿವಮೊಗ್ಗ : ಫೆ. 24 ರಂದು ಉದ್ಯೋಗ ಮೇಳ - 50 ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗಿ Previous post shimoga | ಶಿವಮೊಗ್ಗ : ಫೆ. 24 ರಂದು ಉದ್ಯೋಗ ಮೇಳ – 50 ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗಿ
bhadravati | Bhadravati: Two groups fought on the road! bhadravati | ಭದ್ರಾವತಿಯಲ್ಲಿ ಇದೇನಿದು..? : ಹಾಡಹಗಲೇ ರಸ್ತೆಯಲ್ಲಿಯೇ ಲಾಂಗ್ ದೊಣ್ಣೆಗಳಿಂದ ಹೊಡೆದಾಡಿಕೊಂಡ  ಎರಡು ಗುಂಪುಗಳು! Next post bhadravati | ಭದ್ರಾವತಿಯಲ್ಲಿ ಇದೇನಿದು..? : ಹಾಡಹಗಲೇ ರಸ್ತೆಯಲ್ಲಿಯೇ ಲಾಂಗ್, ದೊಣ್ಣೆಗಳಿಂದ ಹೊಡೆದಾಡಿಕೊಂಡ  ಎರಡು ಗುಂಪುಗಳು!