E-Khata campaign: Shimoga DC strict warns the officials to respond adequately to the public! shimoga | ಇ – ಖಾತಾ ಅಭಿಯಾನ : ಅಧಿಕಾರಿಗಳಿಗೆ ಶಿವಮೊಗ್ಗ ಡಿಸಿ ಖಡಕ್ ಎಚ್ಚರಿಕೆ!

shimoga | ಎ – ಖಾತಾ, ಬಿ – ಖಾತಾ ಪಡೆಯುವುದು ಹೇಗೆ? ನಿಯಮಗಳೇನು? ಶಿವಮೊಗ್ಗ ಡಿಸಿ ಪ್ರಕಟಣೆಯೇನು?

ಶಿವಮೊಗ್ಗ (shivamogga), ಫೆ.18 : ರಾಜ್ಯದ ವಿವಿಧೆಡೆ ಸ್ಥಿರಾಸ್ತಿಗಳಿಗೆ ಇ – ಖಾತಾ ವಿಷಯ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಈ ನಡುವೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಗೊಂದಲ ಪರಿಹಾರಕ್ಕೆ ಕ್ರಮಕೈಗೊಂಡಿದ್ದರು. ಎ – ಖಾತಾ, ಬಿ – ಖಾತಾ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ನೀಡಿದ್ದರು.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿಯೂ ಇ – ಖಾತಾ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಸಾರ್ವಜನಿಕ ವಲಯದಿಂದ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಈ ನಡುವೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎ – ಖಾತಾ ಹಾಗೂ ಬಿ – ಖಾತಾ ಪಡೆಯುವ  ಕುರಿತಂತೆ, ಜಿಲ್ಲಾಧಿಕಾರಿ ಡಾ. ಗುರುದತ್ ಹೆಗಡೆ ಅವರು ಫೆ. 18 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿವರ ಈ ಮುಂದಿನಂತಿದೆ.

‘ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು /ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

2024 ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳ / ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಎ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೊಂದಾಯಿತ ಮಾರಾಟ ಪತ್ರ / ದಾನ ಪತ್ರ/ ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು,

ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಸಲ್ಲಿಸಬೇಕು.

ಹಾಗೂ ಬಿ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸಲು 2024 ಸೆ.10 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು / ದಾನ ಪತ್ರ / ವಿಭಾಗ ಪತ್ರಗಳು / ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ,

ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಚೀಟಿ ಪ್ರತಿಯನ್ನು ಸಲ್ಲಿಸಬೇಕು. ಈ ಎಲ್ಲಾ ದಾಖಲೆಗಳನ್ನು ಈ ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ಸಲ್ಲಿಸಿ, ಇ-ಖಾತೆಯನ್ನು ಪಡೆಯುಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Shimoga, Feb 18: The issue of e – khata for immovable properties in various parts of the state has become a hotbed of confusion. Meanwhile, CM Siddaramaiah himself took steps to resolve the confusion. He explained about A – Khata, B – Khata. The officials were given a deadline of three months.

E-Katha had become a nest of confusion in Shimoga Mahanagara Corporation too. There were many allegations from the public sector. Meanwhile, District Collector Dr. Gurudutt Hegde has released a press statement on February 18 about getting E-Katha and B-Katha in urban local bodies of the district. The details are as follows.

The DC said that the Karnataka Municipal Councils Tax Rules 2025 and Municipal Corporations Tax Rules 2025 have provided provision for getting A-Katha and B-Katha for plots/buildings under the jurisdiction of Municipal Corporations and Municipal Corporations.

shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Previous post shimoga | ಶಿವಮೊಗ್ಗ : ಫೆ. 20 ರಂದು ಈ ಪ್ರದೇಶಗಳಲ್ಲಿ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
shimoga | state budget | Shimoga: State Budget - What is the advice of the former MLA to the CM? shimoga | state budget | ಶಿವಮೊಗ್ಗ : ರಾಜ್ಯ ಬಜೆಟ್ - ಸಿಎಂಗೆ ಮಾಜಿ ಶಾಸಕರ ಸಲಹೆಯೇನು? Next post shimoga | state budget | ಶಿವಮೊಗ್ಗ : ರಾಜ್ಯ ಬಜೆಟ್ – ಸಿಎಂಗೆ ಮಾಜಿ ಶಾಸಕರ ಸಲಹೆಯೇನು?