
shimoga | state budget | ಶಿವಮೊಗ್ಗ : ರಾಜ್ಯ ಬಜೆಟ್ – ಸಿಎಂಗೆ ಮಾಜಿ ಶಾಸಕರ ಸಲಹೆಯೇನು?
ಶಿವಮೊಗ್ಗ (shivamogga), ಫೆ. 18: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೈತರು ಹಾಗೂ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಅನುಕೂಲಕರ ಯೋಜನೆಗಳ ಜಾರಿಗೆ ಆದ್ಯತೆ ನೀಡ ಬೇಕೆಂದು ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಬಡ ಕುಟುಂಬಗಳಿಗೆ ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಆಶ್ರಯ ನಿವೇಶನಗಳನ್ನು ನೀಡಬೇಕು. ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ನೀಡಿ, ಪ್ರಾಥಮಿಕ ಶಾಲೆಗಳೊಂದಿಗೆ ಕಡ್ಡಾಯವಾಗಿ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಆರಂಭಿಸಬೇಕು.
ಪ್ರತಿದಿನ ಮಕ್ಕಳಿಗೆ ಹಾಲು ಮೊಟ್ಟಯನ್ನು ಪೌಷ್ಟಿಕ ಆಹಾರವಾಗಿ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ನವೀಕರಿಸಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಹಾಗೂ ಔಷದಿಗಳು ಸಿಗುವಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ.
ರೈತರಿಗೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ವಿತರಿಸಲು ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ವಿಶೇಷ ಯೋಜನೆ ರೂಪಿಸಬೇಕು.
ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಭದ್ರಾವತಿಯ MPM ಕಾರ್ಖಾನೆ ಪುನಶ್ಚೇತನಕ್ಕೆ ಸಹಕಾರ ನೀಡಬೇಕು. ತುಂಗಾಭದ್ರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯಾಗಿ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭದ್ರಾ ಹಾಗೂ ತುಂಗಾ ಡ್ಯಾಂ ಸೇರಿದಂತೆ ದೊಡ್ಡ ಡ್ಯಾಂಗಳ ಆವರಣದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಮ್ಯೂಸಿಕಲ್ ಪೌಂಟನ್ ಅಭಿವೃದ್ದಿ ಪಡಿಸಬೇಕು. ಆಗುಂಬೆ ಸೂರ್ಯಸ್ತಮಾನ ಜಾಗವನ್ನು ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವೃದ್ದಿ ಮಾಡಬೇಕು.
ಬಜೆಟ್‌ನಲ್ಲಿ ಪೌರನೌಕರರ ಆರೋಗ್ಯ ಹಾಗೂ ನಿತ್ಯ ಉಪಹಾರ ಯೋಜನೆಯನ್ನು ರಾಜ್ಯಮಟ್ಟದಲ್ಲಿ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ. ಅಲ್ಲದೇ ಇದಕ್ಕಾಗಿ ಹೆಚ್ಚುವರಿ ಹಣವನ್ನು ಶ್ರೀಮಂತರು ಬಳಸುವ ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹಾಕುವ ಮೂಲಕ ಸಂಗ್ರಹಿಸುವಂತೆ ಸಹ ಸಲಹೆ ನೀಡಿದ್ದಾರೆ.
Shimoga, Feb 18: Former State MLAs’ Forum President HM Chandrasekharappa has appealed to Chief Minister Siddaramaiah to give priority to the implementation of favorable schemes for farmers and middle and poor families in the current budget of the state government. #karnatakabudget, #budget,