
ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರಿದ ಪೊಲೀಸ್ ಬ್ರೀಫಿಂಗ್!
ಶಿವಮೊಗ್ಗ, ಮಾ. 26: ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಭಾನುವಾರ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬ್ರೀಫಿಂಗ್ ನಡೆಯಿತು.
ಆಯಾ ಠಾಣೆಗಳ ಠಾಣಾಧಿಕಾರಿಗಳ ನೇತೃತ್ವದಲ್ಲಿ ಬ್ರೀಫಿಂಗ್ ಸಭೆಗಳು ನಡೆಯಿತು. ಠಾಣೆಯ ದೈನಂದಿನ ಕರ್ತವ್ಯ ನಿರ್ವಹಣೆ ಮತ್ತೀತರ ವಿಷಯಗಳ ಕುರಿತಂತೆ ಠಾಣಾಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದರು.
ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ, ಮೇಲಿನ ತುಂಗಾನಗರ, ಅಶೋಕ ರಸ್ತೆ, ಭದ್ರಾವತಿ ನಗರದ ಜಯಶ್ರೀ ಸರ್ಕಲ್, ನ್ಯೂ ಟೌನ್ ನ ವಿಐಎಸ್ಎಲ್ ಗೇಟ್, ಹೊಳೆಹೊನ್ನೂರಿನ ನೃಪತುಂಗ ಸರ್ಕಲ್, ಸಾಗರ ಪಟ್ಟಣದ ಜೆ.ಸಿ.ರಸ್ತೆ, ಹೊಸನಗರದ ಕೆಇಬಿ ಸರ್ಕಲ್,

ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಸಿ.ಕೆ.ರಸ್ತೆ, ಆಗುಂಬೆ ಬಸ್ ನಿಲ್ದಾಣ, ರಿಪ್ಪನ್ ಪೇಟೆಯ ಗವಟೂರು, ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಬ್ರೀಫಿಂಗ್ ಸಭೆಗಳು ನಡೆದವು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಠಾಣೆಗಳಲ್ಲಿ ನಿಯಮಿತವಾಗಿ ನಡೆಯುವ ಬ್ರೀಫಿಂಗ್ ಸಭೆಗಳನ್ನು, ಪ್ರತಿ ಭಾನುವಾರ ಸಾರ್ವಜಿಕ ಸ್ಥಳಗಳಲ್ಲಿ ನಡೆಸುವ ವ್ಯವಸ್ಥೆ ಜಾರಿಗೊಳಿಸಿದ್ದಾರೆ.