ಅಪಾರ ಪ್ರಮಾಣದ ಗಾಂಜಾ ನಾಶ…!

ಶಿವಮೊಗ್ಗ, ಮಾ. 26: ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಗಾಂಜಾವನ್ನು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಸುಶಾಂತ್ ಎನ್ವರ್ನಮೆಂಟ್ ಟೆಕ್ನಾಲಜಿ ಘಟಕದಲ್ಲಿ ಮಾ. 24 ರಂದು ಸುಟ್ಟು ಹಾಕಲಾಗಿದೆ.

ಎನ್.ಡಿ.ಪಿ.ಎಸ್ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದ್ದ ಒಟ್ಟಾರೆ 20 ಕೆ.ಜಿ. 867 ಗ್ರಾಂ ತೂಕದ ಗಾಂಜಾವನ್ನು ನಾಶಪಡಿಸಲಾಗಿದೆ. ಇದರ ಅಂದಾಜು ಮೌಲ್ಯ 6,44,600 ರೂಪಾಯಿಗಳಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Previous post ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರಿದ ಪೊಲೀಸ್ ಬ್ರೀಫಿಂಗ್!
Next post ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ವಿಶೇಷ ರೈಲು ಸೇವೆ ಮತ್ತೆ 3 ತಿಂಗಳ ಕಾಲ ವಿಸ್ತರಣೆ