ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ವಿಶೇಷ ರೈಲು ಸೇವೆ ಮತ್ತೆ 3 ತಿಂಗಳ ಕಾಲ ವಿಸ್ತರಣೆ

ಶಿವಮೊಗ್ಗ, ಮಾ. 27: ವಾರದಲ್ಲಿ ಎರಡು ದಿನಗಳ ಕಾಲ ಸಂಚರಿಸುವ, ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ಎಕ್ಸ್’ಪ್ರೆಸ್ ರೈಲು ಸೇವೆಯನ್ನು, ಜೂನ್ ತಿಂಗಳವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತಂತೆ ಸೋಮವಾರ ಸಂಸದರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಶಿವಮೊಗ್ಗ-ಮದ್ರಾಸ್ ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ಹಾಗೆಯೇ ಮದ್ರಾಸ್ ನಿಂದ ಪ್ರತಿ ಸೋಮವಾರ ಮತ್ತು ಮಧ್ಯಾಹ್ನ ಮಧ್ಯಾಹ್ನ 3 ಗಂಟೆಗೆ ಹೊರಡಲಿದೆ.

ಸದರಿ ರೈಲನ್ನು ಮಾರ್ಚ್ 31 ರವರೆಗೆ ಓಡಿಸಲು ಈ ಹಿಂದೆ ರೈಲ್ವೆ ಇಲಾಖೆ ಆದೇಶ ಹೊರಡಿಸಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ಮತ್ತೆ ಮೂರು ತಿಂಗಳ ಕಾಲ ರೈಲು ಸೇವೆ ವಿಸ್ತರಿಸಿದೆ.

ಸದರಿ ರೈಲು ಸೇವೆಯನ್ನು ಖಾಯಂಗೊಳಿಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಶಿವಮೊಗ್ಗ-ಮದ್ರಾಸ್ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.

2 thoughts on “ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ವಿಶೇಷ ರೈಲು ಸೇವೆ ಮತ್ತೆ 3 ತಿಂಗಳ ಕಾಲ ವಿಸ್ತರಣೆ

  1. We wanr this train in between stations are SHIVAMOGGA —BHADRAVATHI—BIRURU–CHICKJAJURU–BALLARY—GUNTAKALU—-DHONE—NANDYAL—-KADAPA —TIRUPATI

  2. This Route train is good for all tirupati tirumala pilgrims.. don’t stop this train. Please continue this train every day in a week..

Comments are closed.

Previous post <strong>ಅಪಾರ ಪ್ರಮಾಣದ ಗಾಂಜಾ ನಾಶ…!</strong>
Next post <strong>ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅರೆಸ್ಟ್!</strong>