Demand for a solution to the e-khata confusion in the Shivamogga Corporation! shimoga | ಶಿವಮೊಗ್ಗ ಪಾಲಿಕೆಯಲ್ಲಿ ಇ – ಖಾತಾ ಪರದಾಟ : ಜಿಲ್ಲಾಡಳಿತಕ್ಕೆ ಆಗ್ರಹವೇನು?

shimoga | ಶಿವಮೊಗ್ಗ: ಇ – ಖಾತಾ ಪರದಾಟ, ಜಿಲ್ಲಾಡಳಿತಕ್ಕೆ ಆಗ್ರಹವೇನು?

ಶಿವಮೊಗ್ಗ (shivamogga), ಮಾ. 14: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಬಡಾವಣೆಗಳ ಸಾವಿರಾರು ನಿವಾಸಿಗಳು, ತಮ್ಮ ಸ್ಥಿರಾಸ್ತಿಗಳಿಗೆ ಇ – ಖಾತಾ ಮಾಡಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡು, ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಜನಪರ ಮುಖಂಡರ ನಿಯೋಗ ಆಗ್ರಹಿಸಿದೆ.

ಈ ಸಂಬಂಧ ಮಾರ್ಚ್ 14 ರಂದು ಹೋರಾಟಗಾರ ತೀ ನಾ ಶ್ರೀನಿವಾಸ್, ಮಾಜಿ ನಗರಸಭೆ ಸದಸ್ಯ ಶ್ಯಾಂಸುಂದರ್, ಪತ್ರಕರ್ತ ಶಿ ಜು ಪಾಶಾ ಮತ್ತೀತರ ಮುಖಂಡರ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದ್ದಾರೆ. ಇದಕ್ಕೂ ಮುನ್ನ ಮುಖಂಡರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಅನದಿಕೃತ ಬಡಾವಣೆಗಳಲ್ಲಿನ ಸ್ಥಿರಾಸ್ತಿಗಳಿಗೆ ಬಿ ಖಾತಾ ಮಾಡಿಕೊಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾದುದಾಗಿದೆ. ಆದರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ 10, 15 ಮತ್ತು 20 ವರ್ಷಗಳ ಮೇಲ್ಪಟ್ಟು ಕ್ರಯ ಕರಾರು ಜಿಪಿಎ ಪತ್ರಗಳ ಮೇಲೆ ಮನೆ ಕಟ್ಟಕೊಂಡು ವಾಸ ಮಾಡುತ್ತಿರುವ ನಾಗರೀಕರಿಗೆ ಇ – ಖಾತಾ ದೊರಕುತ್ತಿಲ್ಲ.  ಇಂತಹ ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಹಕ್ಕು ಒಡೆತನ ಹಾಗೂ ಬಿ-ಖಾತಾ ಮಾಡಿಕೊಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರ ಎ – ಬಿ ಖಾತಾ ಕುರಿತಂತೆ ಸಲ್ಲಿಸಬೇಕಾದ ದಾಖಲೆಗಳ ಸ್ಪಷ್ಟ ಆದೇಶ ಹೊರಡಿಸಿದೆ. ಕಾಲಮಿತಿಯಲ್ಲಿ ಇ – ಖಾತಾ ಮಾಡಿಕೊಡುವಂತೆ ಸೂಚಿಸಿದೆ. ಆದರೆ ಇದರಾಚೆಗೂ ಹಲವು ರೀತಿಯ ಸಮಸ್ಯೆಗಳಿವೆ. ಕೆಲ  ಸ್ವತ್ತುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದಲ್ಲಿ ಸ್ಪಷ್ಟ ನಿಲುವು ಇಲ್ಲ. 

ಇದರಿಂದ ನಗರ ವ್ಯಾಪ್ತಿಯ ಹೊಸಮನೆ, ಶರಾವತಿನಗರ, ವಿನೋಬನಗರ, ಅಶೋಕನಗರ, ಮಿಳಘಟ್ಟ, ಮಂಜುನಾಥ ಬಡಾವಣೆ, ಗುಂಡಪ್ಪಶೆಡ್, ಕಾಶಿಪುರ, ಗೋಪಾಳದಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ಸಾವಿರಾರು ನಿವಾಸಿಗಳು ತಮ್ಮ ಸ್ಥಿರಾಸ್ತಿಗಳಿಗೆ ಇ – ಖಾತಾ ಮಾಡಿಸಲು ಸಾಧ್ಯವಾಗದಂತಾಗಿದೆ ಎಂದು ಹೇಳಿದ್ದಾರೆ.

ಕಂದಾಯ ಜಾಗದಲ್ಲಿ ನೊಂದಣಿ ಆಗದೆ ಕ್ರಯ ಕರಾರು (ಅಗ್ರಿಮೆಂಟ್ ), ಜಿಪಿಎ ಪತ್ರ,.ಆಧಾರ ಪತ್ರಗಳ ಮೇಲೆ ಮಾಲೀಕರ ತಕರಾರು ಇಲ್ಲದ ಹಾಗೂ ನ್ಯಾಯಾಲಯದಲ್ಲಿ ದಾವಾ ಇಲ್ಲದ ಸ್ವತ್ತುಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ವಿನೋಬನಗರ ವ್ಯಾಪ್ತಿಗೆ ಸೇರಿರುವ ಬೆಂಕಿನಗರದಲ್ಲಿ ಆರ್.ಎಂ.ಸಿ ಇಂಡಸ್ಟ್ರೀಯಲ್ [ಕೆ.ಎಸ್.ಎಸ್.ಐ.ಡಿ.ಸಿ] ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ 1988 ರಿಂದ ಸುಮಾರು 124 ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಇವರಿಗೂ ಯಾವುದೇ ದಾಖಲೆಗಳು ಇರುವುದಿಲ್ಲ ಎಂದು ಹೇಳಿದ್ದಾರೆ.

ಇವರು ಸಹ ಬಡವರು ಕೂಲಿ ಕಾರ್ಮಿಕರಾಗಿದ್ದಾರೆ. ಇವರೂ ಸಹ ಮೂಲಭೂತ ಸೌಕರ್ಯ ಪಡೆದಿದ್ದಾರೆ. ಇಂತಹ ನಿವಾಸಿಗಳ ಸ್ಥಿರಾಸ್ತಿಗಳಿಗೆ ಇ – ಖಾತಾ ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್, ಪ್ರಕಾಶ್, ಚನ್ನೇಶ್, ರಮೇಶ್, ಅರುಣ್ ಕುಮಾರ್, ಸುರೇಶ್ ಮೊದಲಾದವರಿದ್ದರು.

Shivamogga, March 14: Thousands of residents of several blocks under the jurisdiction of the Shivamogga Municipal Corporation are facing difficulties as they are unable to register their immovable properties for e-Khata. Former municipal council member Shyam Sundar has demanded that the district administration should take necessary steps immediately in this regard and facilitate the citizens.

There is a delay in creating e-khata in the corporation for the immovable properties of the layouts handed over to the Shivamogga Municipal Corporation in 1994. Thousands of residents of various areas including Gadikoppa and Malavagoppa are facing severe problems, they alleged.

Employing children under the age of 14 and employing minors under the age of 18 in hazardous industries is a punishable offense. Previous post shimoga | ಶಿವಮೊಗ್ಗ : ಪ್ರತಿಷ್ಠಿತ ಹೋಟೆಲ್ ಮಾಲೀಕರ ವಿರುದ್ಧ ಕೇಸ್ : ಕಾರಣವೇನು?
shimoga | Online application invited for Indian Army Agniveer recruitment exam shimoga | ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ Next post shimoga | ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ