shimoga | Online application invited for Indian Army Agniveer recruitment exam shimoga | ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ

shimoga | ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ

ಶಿವಮೊಗ್ಗ (shivamogga), ಮಾ. 14: ಅಗ್ನಿಪಥ್ ಯೋಜನೆಯಡಿ 2025-26 ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಆನ್‌ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- http://www.joinindinarmy.nic.in ಹಾಗೂ ಆನ್‌ಲೈನ್ ಪರೀಕ್ಷೆಯು ಜೂನ್ 2025  ರಲ್ಲಿ ನಡೆಯುವ ಸಾಧ್ಯತೆಯಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಮಾರ್ಚ್ 14 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಆಯ್ಕೆಯು ‘ನ್ಯಾಯಯುತ ಮತ್ತು ಪಾರದರ್ಶಕ’ವಾಗಿದ್ದು, ಅರ್ಹತೆ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಗೆ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು.

ನೇಮಕಾತಿ ಏಜೆಂಟ್‌ಗಳಂತೆ ನಟಿಸುವ, ಆಮಿಷವೊಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ ಇಮೇಲ್: aromangalore2021@gmail.com ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shivamogga, Mar. 14: Online applications have been invited from unmarried male candidates from Bagalkot, Gadag, Vijayapura, Dharwad, Uttara Kannada, Udupi, Davangere, Haveri, Chikkamagaluru and Shivamogga districts for the Agniveer recruitment examination for the year 2025-26 under the Agnipath scheme.

Selection in the Indian Army is ‘fair and transparent’ and is based solely on merit. It has been stated that no one should be bribed for selection or recruitment to the Indian Army at any stage. The Deputy Director of the Shivamogga Soldiers’ Welfare and Rehabilitation Department has issued a press release warning people not to fall prey to people posing as recruitment agents and offering them bait.

Demand for a solution to the e-khata confusion in the Shivamogga Corporation! shimoga | ಶಿವಮೊಗ್ಗ ಪಾಲಿಕೆಯಲ್ಲಿ ಇ – ಖಾತಾ ಪರದಾಟ : ಜಿಲ್ಲಾಡಳಿತಕ್ಕೆ ಆಗ್ರಹವೇನು? Previous post shimoga | ಶಿವಮೊಗ್ಗ: ಇ – ಖಾತಾ ಪರದಾಟ, ಜಿಲ್ಲಾಡಳಿತಕ್ಕೆ ಆಗ್ರಹವೇನು?
bengauru | Bangalore - Honey trap case: What did CM Siddaramaiah say? bengauru | ಬೆಂಗಳೂರು - ಹನಿ ಟ್ರ್ಯಾಪ್ ಪ್ರಕರಣ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post bengaluru | ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನವಾಗಿಲ್ಲ : ಸಿಎಂ