shimoga | Shivamogga: Recruitment under NREGA scheme - Applications invited from eligible candidates shimoga | ಶಿವಮೊಗ್ಗ : ನರೇಗಾ ಯೋಜನೆಯಡಿ ನೇಮಕ - ಅರ್ಹರಿಂದ ಅರ್ಜಿ ಆಹ್ವಾನ

shimoga | ಶಿವಮೊಗ್ಗ : ನರೇಗಾ ಯೋಜನೆಯಡಿ ನೇಮಕ – ಅರ್ಹರಿಂದ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ಮಾ. 14: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸಿ, ಕಾಮಗಾರಿಗಳಲ್ಲಿ ತೊಡಗಿಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಲು ಮತ್ತು ಅನುಷ್ಟಾನಗೊಳಿಸುವ ಕಾರ್ಯಸ್ಥಳದ ಮೇಲ್ವಿಚಾರಣೆ ಮಾಡಲು, 05 ಬಿಎಫ್‌ಟಿ (ಬೇರ್ ಫುಟ್ ಟೆಕ್ನೀಷಿಯನ್) ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಎನ್. ಹೇಮಂತ್ ಅವರು ಮಾರ್ಚ್ 14 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 03 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಅರ್ಜಿಯನ್ನು ಜಿಲ್ಲಾ ಪಂಚಾಯತ್ ಮಹಾತ್ಮಾ ಗಾಂಧಿ ನರೇಗಾ ಶಾಖೆಗೆ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರಬೇಕು.

ಸಕ್ರಿಯ ಕೆಲಸಗಾರನಾಗಿರಬೇಕು. ಅಂದರೆ 2021 ರಿಂದ 2023 ರವರೆಗೆ 3 ವರ್ಷಗಳಲ್ಲಿ ಕನಿಷ್ಟ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರಾಗಿ ಕೆಲಸ ಮಾಡಿರಬೇಕು.

ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ  ಪ್ರಾಧ್ಯಾನ್ಯತೆ ನೀಡಲಾಗುವುದು. 45 ವರ್ಷಕ್ಕಿಂತ ಕಡಿಮೆ ವಯೋಮಿತಿ ಉಳ್ಳವರಾಗಿರಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಎನ್.ಹೇಮಂತ್ ಅವರು ತಿಳಿಸಿದ್ದಾರೆ.

Shivamogga, March 14: Applications have been invited for the selection of 05 BFT (Barefoot Technician) candidates to organize and involve laborers in works under the Mahatma Gandhi National Employment Guarantee Scheme, create more man-days, and supervise the implementation work site.

This was informed in a statement issued on March 14 by Zilla Panchayat Chief Executive Officer N. Hemanth. April 03 is the last date for submitting applications. The application should be submitted to the Zilla Panchayat Mahatma Gandhi NREGA branch.

Jog Falls viewing allowed from May 1st ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ Previous post jogfalls |ಜೋಗ ಜಲಪಾತಕ್ಕೆ ಪ್ರವೇಶ ನಿರ್ಬಂಧ ಎಲ್ಲಿಯವರೆಗೆ? ಕಾರಣವೇನು?
shimoga | Solar Ramesh passes away: Organ donation A family that showed humanity even in death shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!                     Next post shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!