shimoga | Shivamogga: Demand for implementation of drinking water project! shimoga | ಶಿವಮೊಗ್ಗ : ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹ!

shimoga | ಶಿವಮೊಗ್ಗ : 24X7 ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಆಗ್ರಹ!

ಶಿವಮೊಗ್ಗ (shivamogga), ಮಾ. 15: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ, 24X7 ಯೋಜನೆಯಡಿ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ, ಮಾರ್ಚ್ 15 ರಂದು ಜಿಲ್ಲಾ ಶೋಷಿತ ಸಮುದಾಯಗಳ ವೇದಿಕೆ ಜಲ ಮಂಡಳಿ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿತು.

ಕಳೆದ ಮೂರು ವರ್ಷಗಳ ಹಿಂದೆಯೇ 24X7 ಯೋಜನೆಯಡಿ ಪೈಪ್ ಲೈನ್ ಹಾಕಲಾಗಿದೆ. ಆದರೆ ಇಲ್ಲಿಯವರೆಗೂ ಹನಿ ನೀರು ಕೂಡ ಪೂರೈಕೆಯಾಗಿಲ್ಲ. ಮತ್ತೊಂದೆಡೆ, ಕಳೆದ ಕೆಲ ತಿಂಗಳುಗಳಿಂದ ಪೈಪ್ ಲೈನ್ ಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಆದರೆ ಇಲ್ಲಿಯವರೆಗೂ ದುರಸ್ತಿ ಕಾರ್ಯವೂ ಪೂರ್ಣಗೊಳಿಸಿಲ್ಲ. ಎಂದು ಸಂಘಟನೆ ತಿಳಿಸಿದೆ.

ಸೋಮಿನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಹೊಸ ಹೊಸ ಬಡಾವಣೆಗಳು ರಚನೆಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಆದರೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಸಂಘಟನೆ ಹೇಳಿದೆ.

ಈ ಹಿನ್ನೆಲೆಯಲ್ಲಿ 24X7 ಯೋಜನೆ ಕಾಮಗಾರಿ ಪೂರ್ಣಗೊಳಿಸಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನೀರಿನ ಹಾಹಾಕಾರ ಪರಿಹಾರವಾಗಿಲ್ಲ ಎಂದು ಸಂಘಟನೆ ದೂರಿದೆ.

ತಕ್ಷಣವೇ ಸೋಮಿನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ 24X7 ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಕ್ಬುಲ್ ಅಹಮದ್, ದಾದಾ ಖಲಂದರ್, ಹಬೀಬ್, ಮಹಮ್ಮದ್ ಅಲಿ, ಪುಷ್ಪುಲತಾ, ಗೌಸ್ ಪೀರ್, ಶಿಕಾರಿಪುರ ಜಾಕೀರ್ ಹುಸೇಸ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shivamogga: Demand for implementation of drinking water project for Sominakoppa area! :_ Shivamogga, March 15: On March 15, the District Exploited Communities Forum submitted a petition to the officials at the Water Board office, demanding that drinking water be supplied to the Sominakoppa area on the outskirts of Shivamogga city and surrounding areas under the 24*7 scheme.

shimoga | Solar Ramesh passes away: Organ donation A family that showed humanity even in death shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!                     Previous post shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!
shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Next post shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ?