Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ!

rain alert | ಮಾ. 22 ರಿಂದ 25 ರವರೆಗೆ ವಿವಿಧೆಡೆ ಮಳೆ ಮುನ್ಸೂಚನೆ!

ಬೆಂಗಳೂರು, ಮಾ. 20: ರಾಜ್ಯಾದ್ಯಂತ ಬಿಸಿಲ ಬೇಗೆ ಹೆಚ್ಚಾಗಿದೆ. ರಣ ಬಿಸಿಲಿಗೆ ನಾಗರೀಕರು ತತ್ತರಿಸುತ್ತಿದ್ದಾರೆ.  ಈ ನಡುವೆ ಮಾರ್ಚ್ 22 ರಿಂದ 25 ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾರ್ಚ್ 22 ರಿಂದ 23 ರವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ,

ರಾಮನಗರ, ಮಂಡ್ಯ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮಾ. 23 ರಂದು ಉಡುಪಿ, ರಾಮನಗರ, ಕೊಪ್ಪಳ, ಗದಗ ಜಿಲ್ಲೆಗಳ ವಿವಿಧೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ. ಹಾಗೂ ಮಾ. 24, 25 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬೆಳಗಾವಿ,

ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

Bengaluru, Mar 20: The heat wave has increased across the state. Citizens are reeling under the scorching heat. Meanwhile, the Meteorological Department has forecast that there is a possibility of rain in many parts of the state from March 22 to 25.

From March 22nd to 23rd, Dakshina Kannada, Chikkamagaluru, Mysore, Kodagu, Hassan, Chamarajanagar, Bangalore Rural, Bangalore Urban, Tumkur, Chikkaballapur, Kolar, Ramanagara, Mandya, Bidar, Kalaburagi, Yadgir, Vijayapura and Raichur.. It has been said that there is a possibility of light rain accompanied by thunder in various parts of the districts.

On Mar. 23, light rain is likely to occur at various places in Udupi, Ramanagara, Koppal, Gadag districts. And on Mar. 24, 25, Dakshina Kannada, Udupi, Uttara Kannada, Haveri, Dharwad, Gadag, Belgaum, Chamarajanagar, Mandya, Mysore, Hassan, Kodagu, Chikkamagaluru and Shivamogga. #rain, #rainfall, #rainforecast, #ಮಳೆ, #ಮಳೆ,

shimoga | Shivamogga: Upa Lokayukta's sudden visit continues – two cases registered! shimoga | ಶಿವಮೊಗ್ಗ : ಉಪ ಲೋಕಾಯುಕ್ತರ ಮುಂದುವರಿದ ದಿಢೀರ್ ಭೇಟಿ – ಎರಡು ಕೇಸ್ ದಾಖಲು! Previous post shimoga | ಶಿವಮೊಗ್ಗ : ಉಪ ಲೋಕಾಯುಕ್ತರ ಮುಂದುವರಿದ ದಿಢೀರ್ ಭೇಟಿ – ಎರಡು ಕೇಸ್ ದಾಖಲು!
bengauru | Bangalore - Honey trap case: What did CM Siddaramaiah say? bengauru | ಬೆಂಗಳೂರು - ಹನಿ ಟ್ರ್ಯಾಪ್ ಪ್ರಕರಣ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post bengauru | ಬೆಂಗಳೂರು – ಹನಿ ಟ್ರ್ಯಾಪ್ ಪ್ರಕರಣ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?