
shimoga | ಶಿವಮೊಗ್ಗ : ಭದ್ರಾ ನಾಲೆ ಕಿರು ಸೇತುವೆ ಕುಸಿತ – ಸಚಿವರ ಭೇಟಿ
ಶಿವಮೊಗ್ಗ (shivamogga), ಮಾ. 22: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಸಮೀಪದ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ನಿರ್ಮಿಸಿದ್ದ ಕಿರು ಸೇತುವೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಮಾರ್ಚ್ 22 ರಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸೇತುವೆ ಕುಸಿತಕ್ಕೊಳಗಾದ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಸ್ಥಳೀಯರ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಸಚಿವರು, ತೋಟ ಹಾಗೂ ಗದ್ದೆಗಳಿಗೆ ಓಡಾಡಲು ಜನ ಸಂಪರ್ಕ ಸೇತುವೆ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಕುಸಿದು ಬಿದ್ದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಳೆಹೊನ್ನೂರು ಭಾಗದ ಕಾಂಗ್ರೆಸ್ ಮುಖಂಡ ಸಿ ಹನುಮಂತು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ : ಬಳಿಕ ಮಾರ್ಗ ಮಧ್ಯೆ ಹಂಚಿನ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವರು ಭೇಟಿ ನೀಡಿದ್ದರು. ಮಕ್ಕಳು ಹೂವು ನೀಡಿ ಸ್ವಾಗತಿಸಿದರು.
ಶಾಲೆಯು ಹೆದ್ಧಾರಿ ಪಕ್ಕದಲ್ಲಿರುವುದರಿಂದಾಗಿ ವಾಹನಗಳು ಎಡಬಿಡದೆ ಸಂಚರಿಸುತ್ತಿರುತ್ತವೆ. ಆದ್ದರಿಂದ ಅಪಘಾತ ಸಂಭವಿಸದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಇದೇ ವೇಳೆ ಸಚಿವರು ಸೂಚಿಸಿದರು.
Shivamogga, March 22: An incident has occurred in which a small bridge built over the Bhadra canal collapsed in Hanchinasiddapura village near Holehonnur in the Shivamogga Rural Assembly constituency. On March 22, District In-charge Minister Madhu Bangarappa visited the site of the bridge collapse and inspected it. He listened to the complaints of the locals.