hosanagara | Gold jewellery stolen from house: Jeep driver arrested! hosanagara | ಹೊಸನಗರ : ಮನೆಯಲ್ಲಿ ಚಿನ್ನಾಭರಣ ಕಳ್ಳತನ - ಜೀಪ್ ಚಾಲಕನ ಬಂಧನ!

hosanagara | ಹೊಸನಗರ : ಮನೆಯಲ್ಲಿ ಚಿನ್ನಾಭರಣ ಕಳ್ಳತನ – ಜೀಪ್ ಚಾಲಕನ ಬಂಧನ!

ಹೊಸನಗರ (hosanagara), ಮಾ. 22: ಮನೆಯೊಂದರಲ್ಲಿ ಚಿನ್ನಾಭರಣ – ನಗದು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಜೀಪ್ ಚಾಲಕನೋರ್ವನನ್ನ ಹೊಸನಗರ ತಾಲೂಕಿನ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಮಾರ್ಚ್ 20 ರಂದು ನಡೆದಿದೆ.

ಹೊಸನಗರ ತಾಲೂಕು ಕಟ್ಟಿನಹೊಳೆ ಸಮೀಪದ ಮತ್ತಿ ಕೈ ನಿವಾಸಿ ಕೆ ಆರ್ ಶರತ್ ಕುಮಾರ್ (26) ಬಂಧಿತ ಜೀಪ್ ಚಾಲಕ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ 1 ಲಕ್ಷ ರೂ. ಮೌಲ್ಯದ 12 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಳ್ಳತನಕ್ಕೆ ಬಳಸಿದ್ದ, ಒಂದು ದ್ವಿ ಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಡಿವೈಎಸ್ಪಿ ಅರವಿಂದ್ ಕಲಗುಚ್ಚಿ ಮಾರ್ಗದರ್ಶನದಲ್ಲಿ ಹೊಸನಗರ ಸರ್ಕಲ್ ಇನ್ಸ್’ಪೆಕ್ಟರ್ ಗುರುಣ್ಣ ಹೆಬ್ಬಾರ್, ಸಬ್ ಇನ್ಸ್’ಪೆಕ್ಟರ್ ಗಳಾದ ಶಿವಾನಂದ ವೈ ಕೆ, ಕುಮಾರ್ ಟಿ ಎಸ್, ಎಎಸ್ಐ ಶೇಕ್ ಅಮೀರ್ ಜಾನ್,

ಸಿಬ್ಬಂದಿಗಳಾದ ಕಿರಣ್, ವಿಶ್ವನಾಥ್, ಪ್ರವೀಣ್ ಕುಮಾರ್, ವಿಶ್ವನಾಥ್, ರವಿಚಂದ್ರ, ಸುಜಯ್ ಕುಮಾರ್, ಪ್ರಜ್ವಲ್ ಡಿ ಎಸ್, ಸಚಿನ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : 03-03-2025 ರಂದು ಹೊಸನಗರ ತಾಲೂಕಿನ ದೊಡ್ಡಮನೆ ಮತ್ತಿ ಕೈ ಗ್ರಾಮದ ನಿವಾಸಿ ಪರಮೇಶ್ವರ ಎಂ ಎಸ್ (65) ಎಂಬುವರು, ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಸಂಬಂಧಿಯೋರ್ವರ ಮನೆಗೆ ತೆರಳಿದ್ದರು.

ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಆರೋಪಿಯು, ಮನೆಯ ಕೊಠಡಿಯ ಕಪಾಟಿನಲ್ಲಿದ್ದ ಚಿನ್ನದ ಸರ ಹಾಗೂ 15 ಸಾವಿರ ನಗದು ಅಪಹರಿಸಿ ಪರಾರಿಯಾಗಿದ್ದ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Hosanagar, Mar 22: On March 20, the Nagar police in Hosanagar taluk arrested a jeep driver on charges of stealing jewelry and cash from a house. #hosanagara, #hosanagarataluk, #nagarapolicestation,

Shivamogga: Bhadra Canal short bridge collapses – Minister visits shimoga | ಶಿವಮೊಗ್ಗ : ಭದ್ರಾ ನಾಲೆ ಕಿರು ಸೇತುವೆ ಕುಸಿತ – ಸಚಿವರ ಭೇಟಿ Previous post shimoga | ಶಿವಮೊಗ್ಗ : ಭದ್ರಾ ನಾಲೆ ಕಿರು ಸೇತುವೆ ಕುಸಿತ – ಸಚಿವರ ಭೇಟಿ
shimoga | Shivamogga: thieves carried away a 'police cutout' on the highway..! shimoga | ಶಿವಮೊಗ್ಗ : ಹೆದ್ದಾರಿಯಲ್ಲಿದ್ದ ‘ಪೊಲೀಸ್ ಕಟೌಟ್’ ಹೊತ್ತೊಯ್ದ ಐನಾತಿ ಕಳ್ಳರು..! Next post shimoga | ಶಿವಮೊಗ್ಗ : ಹೆದ್ದಾರಿಯಲ್ಲಿದ್ದ ‘ಪೊಲೀಸ್ ಕಟೌಟ್’ ಹೊತ್ತೊಯ್ದ ಐನಾತಿ ಕಳ್ಳರು..!