shimoga | Shivamogga: Minister Madhu Bangarappa openly invites JDS MLA Sharada sharada puryanaik to join Congress! shimoga | ಶಿವಮೊಗ್ಗ : ಕಾಂಗ್ರೆಸ್ ಸೇರ್ಪಡೆಯಾಗುವಂತೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್’ಗೆ ಸಚಿವ ಮಧು ಬಂಗಾರಪ್ಪ ಆಹ್ವಾನ!

shimoga | ಶಿವಮೊಗ್ಗ : ಕಾಂಗ್ರೆಸ್ ಸೇರ್ಪಡೆಯಾಗುವಂತೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್’ಗೆ ಸಚಿವ ಮಧು ಬಂಗಾರಪ್ಪ ಆಹ್ವಾನ!

ಶಿವಮೊಗ್ಗ, ಮಾ. 23: ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಾರ್ವಜನಿಕ ವೇದಿಕೆಯಲ್ಲಿಯೇ ಬಹಿರಂಗ ಆಹ್ವಾನ ನೀಡಿದ ಘಟನೆ ನಡೆಯಿತು.

ಮಾ. 23 ರಂದು ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದ ಬಾರೆಹಳ್ಳ ಮತ್ತು ಹಾಯ್’ಹೊಳೆ ಕಿರು ಜಲಾಶಯಗಳ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ನಂತರ, ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿತವಾಗಿತ್ತು.

ಮಧು ಬಂಗಾರಪ್ಪ ಅವರು ಭಾಷಣ ಮಾಡುವ ವೇಳೆ, ಕಾಂಗ್ರೆಸ್ ಸೇರ್ಪಡೆಯಾಗುವಂತೆ ಬಹಿರಂಗವಾಗಿಯೇ ಮನವಿ ಮಾಡಿದರು. ಸಚಿವರ ಈ ಹೇಳಿಕೆಯಿಂದ ವೇದಿಕೆ ಮೇಲೆ ಉಪಸ್ಥಿತರಿದ್ದ ಶಾರದಾ ಪೂರ್ಯಾನಾಯ್ಕ್ ಅವರು ನಗುತ್ತಲೇ ಮೌನವಾದರು. ಯಾವುದೇ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ.

ಬಿಸಿಲಿದ್ದಾಗ ಒಣಗಿಸಬೇಕು : ‘ಚುನಾವಣೆ ಆಗಮಿಸಿದಾಗ ಸಾಕಷ್ಟು ಕಷ್ಟವಾಗುತ್ತದೆ. ಅದಕ್ಕೆ ಶಾರದಕ್ಕನವರಿಗೆ ಹೇಳೋದು. ನೀವಾದ್ರೂ ಬನ್ನಿ, ಇಲ್ಲ ನಾನಾದ್ರೂ ಬರುತ್ತೆನೆ. ಪ್ರಸ್ತುತ ಅಧಿಕಾರ ನನ್ನ ಬಳಿಯಿರುವುದರಿಂದ ನಾನು ಬರಲು ಕಷ್ಟವಾಗುತ್ತದೆ’ ಎಂದು ಮಧು ಬಂಗಾರಪ್ಪ ಸೂಚ್ಯವಾಗಿ ಹೇಳಿದರು.

‘ನಾನು ಮತ ಕೇಳಲು ಕೂಡ ಕಷ್ಟವಾಗುತ್ತದೆ. ಜನರಿಗೂ ಕೂಡ ನನಗೆ ಮತ ಕೇಳಬೇಕೋ, ಶಾರದಕ್ಕನಿಗೆ ಮತ ಕೇಳಬೇಕೋ ಎಂಬ ಕಷ್ಟಕ್ಕೆ ಸಿಲುಕುತ್ತಾರೆ. ಈ ಕಾರಣದಿಂದ ನೀವೆಲ್ಲಾ ಅವರ ಮನೆಗೆ ಹೋಗಿ ಪ್ರತಿಭಟನೆ ಮಾಡಿ’ ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರಿಗೆ ಸಚಿವರು ಹಾಸ್ಯವಾಗಿ ತಿಳಿಸಿದರು.

‘ಯಾವಾಗಲೂ ಬುದ್ದಿವಂತಿಕೆ ಹೇಗಿರಬೇಕು ಎಂದರೆ, ಇಂಗ್ಲೀಷನ್ ನಲ್ಲಿ ಒಂದು ಗಾದೆ ಮಾತಿದೆ. ‘ಮೇಕ್ ಎ ವೈಲ್ ದ ಸೈನ್ ಶೈನ್ಸ್…’, ಇದರ ಕನ್ನಡ ಅರ್ಥ ಏನೆಂಬುವುದು ಯಾರಿಗಾದರೂ (ಸಭಿಕರಿಗೆ) ಗೊತ್ತಾ. ಇದು ನಮ್ಮಪ್ಪ (ಎಸ್ ಬಂಗಾರಪ್ಪ) ಅವರು ಹೇಳುತ್ತಿದ್ದರು. ನಾನೇನೂ ಕನ್ನಡ ಪಂಡಿತನಲ್ಲ. ನನ್ನ ಕನ್ನಡ ಏನೆಂಬುವುದು ಪೇಪರ್ ನವರು ಬರೆಯುತ್ತಿರುತ್ತಾರೆ. ಅದು ಬೇರೆ ಪ್ರಶ್ನೆ.,

‘ಮೇಕ್ ಎ ವೈಲ್ ದ ಸೈನ್ ಶೈನ್ಸ್…’ ಎಂದರೆ ಬಿಸಿಲಿದ್ದಾಗ ಒಣಗಿಸಬೇಕು. ಮೋಡ ಇದ್ದಾಗ ಒಣಗಿಸಲು ಅಗುತ್ತದೆಯೇ? ಅಕ್ಕಾ ಬಿಸಿಲಿದೆ. ತೀರ್ಮಾನ ಮಾಡಿ ನೋಡಿ…’ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ ಸಲಹೆ ನೀಡಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಭಾಷಣ ಮುಗಿಸಿದರು.

Shivamogga, Mar. 23: An incident occurred when District In-charge Minister Madhu Bangarappa openly invited jds MLA from Shivamogga Rural Assembly constituency sharada puryanaik to join the Congress party on a public platform.

On March 23, after the groundbreaking ceremony for the development work of Barehalla and Hai’hole small reservoirs in Puradalu village of Shivamogga taluk, a stage program was organized in the premises of the village government school.

shimoga | Shivamogga: thieves carried away a 'police cutout' on the highway..! shimoga | ಶಿವಮೊಗ್ಗ : ಹೆದ್ದಾರಿಯಲ್ಲಿದ್ದ ‘ಪೊಲೀಸ್ ಕಟೌಟ್’ ಹೊತ್ತೊಯ್ದ ಐನಾತಿ ಕಳ್ಳರು..! Previous post shimoga | ಶಿವಮೊಗ್ಗ : ಹೆದ್ದಾರಿಯಲ್ಲಿದ್ದ ‘ಪೊಲೀಸ್ ಕಟೌಟ್’ ಹೊತ್ತೊಯ್ದ ಐನಾತಿ ಕಳ್ಳರು..!
Shivamogga: UGD chaos in the prestigious J. H. Patel Layout – Residents outraged by the administration's gross negligence! ಶಿವಮೊಗ್ಗ : ಪ್ರತಿಷ್ಠಿತ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಯುಜಿಡಿ ಅವ್ಯವಸ್ಥೆ – ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಆಕ್ರೋಶ! Next post shimoga | ಶಿವಮೊಗ್ಗ : ಪ್ರತಿಷ್ಠಿತ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಯುಜಿಡಿ ಅವ್ಯವಸ್ಥೆ – ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಆಕ್ರೋಶ!