
shimoga | ಆಫ್ರಿಕಾದ ಗಬಾನ್ ದೇಶದಲ್ಲಿ ಬಂಧನಕ್ಕೊಳಗಾದ ಶಿವಮೊಗ್ಗ, ದಾವಣಗೆರೆಯ 21 ಹಕ್ಕಿಪಿಕ್ಕಿಗಳು!
ಶಿವಮೊಗ್ಗ (shivamogga), ಮಾ. 23: ಆಫ್ರಿಕಾ ಖಂಡದ ಗಬಾನ್ ದೇಶಕ್ಕೆ ವ್ಯಾಪಾರಕ್ಕೆಂದು ತೆರಳಿದ್ದ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದ 21 ಜನರನ್ನು, ನಕಲಿ ವೀಸಾ ಹೊಂದಿರುವ ಆರೋಪದಡಿ ಅಲ್ಲಿನ ಸರ್ಕಾರ ಬಂಧಿಸಿರುವ ಮಾಹಿತಿ ತಿಳಿದುಬಂದಿದೆ.
ಬಂಧಿತರಾದವರು ಆಯುರ್ವೇದ, ಔಷಧಿ, ತೈಲ ವ್ಯಾಪಾರಕ್ಕೆಂದು ಪಶ್ಚಿಮ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿದ್ದರು. ಗಬಾನ್ ರಾಜಧಾನಿ ಲೆಬ್ರೆವಿಲ್ ನಲ್ಲಿ ಇವರೆಲ್ಲ ನೆಲೆಸಿದ್ದರು ಎಂದು ಹೇಳಲಾಗಿದೆ.
ಪ್ರಸ್ತುತ ಬಂಧಿತರಾದವರಲ್ಲಿ ಶಿವಮೊಗ್ಗ ನಗರದ ಹೊರವಲಯ ಹಕ್ಕಿಪಿಕ್ಕಿ ಕಾಲೋನಿಯ 12 ಜನ ಹಾಗೂ ದಾವಣಗೆರೆ ಜಿಲ್ಲೆಚನ್ನಗಿರಿ ತಾಲೂಕಿನ ಗೋಪನಹಾಳ ಆಸ್ತಾಫನಹಳ್ಳಿಯ 9 ಜನರಿದ್ದಾರೆ. ಇದರಲ್ಲಿ 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳೆಯರಿದ್ದಾರೆ ಎನ್ನಲಾಗಿದೆ.
ಗಬಾನ್ ನ ಹೊಸ ಸರ್ಕಾರವು ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು, ದೇಶ ತೊರೆಯುವಂತೆ ಆದೇಶ ಹೊರಡಿಸಿದೆ. ಅದರಂತೆ ಲೆಬ್ರೆವಿಲ್ ಪೊಲೀಸರು ಅಕ್ರಮವಾಗಿ ವಿದೇಶಿಗರು ನೆಲೆಸಿದ್ದ ವಾಸಸ್ಥಳ ಹಾಗೂ ವ್ಯಾಪಾರಿ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದವರನ್ನು ಪೊಲಿಸರು ನಕಲಿ ವ್ಯಾಪಾರಿ ವೀಸಾ ಹೊಂದಿರುವ ಆರೋಪದಡಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ವೀಸಾ ನೀಡಿದ ಏಜೆಂಟ್, ವೀಸಾ ನವೀಕರಣದ ವೇಳೆ ಸರ್ಕಾರಕ್ಕೆ ಅಗತ್ಯ ಹಣ ಪಾವಸದೆ ನಕಲಿ ವ್ಯಾಪಾರಿ ವೀಸಾ ಮಾಡಿಕೊಟ್ಟು ವಂಚಿಸಿದ್ದಾನೆ ಎಂದು ಹಕ್ಕಿಪಿಕ್ಕಿ ಸಮುದಾಯದವರು ಆರೋಪಿಸಿದ್ದಾರೆ.
ಗಬಾನ್ ಸರ್ಕಾರವು ಹಕ್ಕಿಪಿಕ್ಕಿ ಸಮುದಾಯದವರಿಗೆ ಆರಂಭದಲ್ಲಿ ತಲಾ 2 ಲಕ್ಷ ರೂ. ದಂಡ ವಿಧಿಸಿತ್ತು. ಇದೀಗ 57 ಸಾವಿರ ರೂ. ದಂಡ ಪಾವತಿಸಿ ದೇಶ ತೊರೆಯುವಂತೆ ಸೂಚಿಸಿದ್ದು, ಕೆಲ ದಿನಗಳಲ್ಲಿಯೇ ಹಕ್ಕಿಪಿಕ್ಕಿ ಸಮುದಾಯದವರು ಭಾರತಕ್ಕೆ ಹಿಂದಿರುಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
Shivamogga, March 23: 21 people from the Hakkipikki community of Shivamogga and Davangere districts have been arrested in the African country of Gabon on charges of possessing fake visas.
The arrested individuals had traveled to the African country of Gabon’s to trade in Ayurveda, medicine, and oil. It is said that they were all based in the Gabonese capital, Libreville.