shimoga | Shivamogga: There were exactly 69 baby snakes in the water tank..! shimoga | ಶಿವಮೊಗ್ಗ : ನೀರಿನ ತೊಟ್ಟಿಯಲ್ಲಿದ್ದವು ಬರೋಬ್ಬರಿ 69 ಹಾವಿನ ಮರಿಗಳು..!

shimoga | ಶಿವಮೊಗ್ಗ : ಅಬ್ಬಬ್ಬಾ… ನೀರಿನ ತೊಟ್ಟಿಯಲ್ಲಿದ್ದವು ಬರೋಬ್ಬರಿ 69 ಹಾವಿನ ಮರಿಗಳು..!

ಶಿವಮೊಗ್ಗ (shivamogga), ಮಾ. 24: ಮನೆಯೊಂದರ ನೀರಿನ ತೊಟ್ಟಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 69 ನೀರು ಹಾವಿನ ಮರಿಗಳು ಪತ್ತೆಯಾದ ಕುತೂಹಲಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಈ ಎಲ್ಲ ಹಾವಿನ ಮರಿಗಳನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು, ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಈ ಕುರಿತಂತೆ ಸ್ನೇಕ್ ಕಿರಣ್ ಅವರು ಮಾರ್ಚ್ 24 ರಂದು ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಕಾಶೀಪುರ ಬಡಾವಣೆಯ ಪಶುವೈದ್ಯಕೀಯ ಕಾಲೇಜ್ ರಸ್ತೆಯ ಈಶ್ವರಯ್ಯ ಎಸ್ ಎಂಬುವರ ಮನೆಯ ನೀರಿನ ತೊಟ್ಟಿಯಲ್ಲಿ ಹಾವುಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾ. 22 ರಂದು ನೀರಿನ ತೊಟ್ಟಿಯ ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ನೀರಿನ ತೊಟ್ಟಿಯ ಬಾಗಿಲು ತೆರೆದು ಪರಿಶೀಲಿಸಿದಾಗ, ನೀರಿನೊಳಗೆ ಸಾಕಷ್ಟು ಸಂಖ್ಯೆಯ ಹಾವಿನ ಮರಿಗಳು ಓಡಾಡುತ್ತಿರುವುದು ಕಂಡುಬಂದಿದೆ.

ಇದನ್ನು ಕಂಡು ಭಯಭೀತರಾದ ಕುಟುಂಬ ಸದಸ್ಯರು ತಮಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಭಾರೀ ಸಂಖ್ಯೆಯ ಹಾವಿನ ಮರಿಗಳಿದ್ದವು. ಮೊದಲ ದಿನ 63 ಹಾವಿನ ಮರಿಗಳನ್ನು ರಕ್ಷಿಸಲಾಯಿತು ಎಂದು ಸ್ನೇಕ್ ಕಿರಣ್ ತಿಳಿಸಿದ್ದಾರೆ.

ಮಾರ್ಚ್ 23 ರ ರಾತ್ರಿ ಮತ್ತೆ ನೀರಿನ ಟ್ಯಾಂಕ್ ನಲ್ಲಿ ಹಾವಿನ ಮರಿಗಳು ಕಂಡುಬಂದಿವೆ ಎಂದು ಕುಟುಂಬದವರು ತಿಳಿಸಿದ್ದು, ಸ್ಥಳಕ್ಕಾಗಮಿಸಿ ಮತ್ತೆ 6 ಮರಿಗಳನ್ನು ಸಂರಕ್ಷಿಸಲಾಗಿದೆ. ಒಟ್ಟಾರೆ 69 ಮರಿಗಳನ್ನು ರಕ್ಷಿಸಲಾಗಿದೆ. ನೀರು ಹಾವು ವಿಷರಹಿತ ವರ್ಗಕ್ಕೆ ಸೇರಿದ್ದಾಗಿದ್ದು, ಇವುಗಳು ಕಚ್ಚಿದರೂ ಯಾವುದೇ ಅಪಾಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಹಾವಿನ ಮರಿಗಳನ್ನು ನಿರ್ಜನ ಪ್ರದೇಶದ ನೀರಿನ ಸೆಲೆಯಿರುವ ಸ್ಥಳದಲ್ಲಿ ಬಿಡಲಾಗಿದೆ. ಕಾರ್ಯಾಚರಣೆ ವೇಳೆ ಹಾವಿನ ಮರಿಗಳ ತಾಯಿ ಸುಳಿವು ಪತ್ತೆಯಾಗಿಲ್ಲ. ತಾವು ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದು ಇದೆ ಮೊದಲ ಬಾರಿಯಾಗಿದೆ ಎಂದು ಸ್ನೇಕ್ ಕಿರಣ್ ತಿಳಿಸಿದ್ದಾರೆ.

ಪ್ರಸ್ತುತ ಬೇಸಿಗೆ ಸಮಯವಾಗಿರುವ ಕಾರಣದಿಂದ ತಣ್ಣನೆ ವಾತಾವರಣದಲ್ಲಿ ನೀರಿನ ಹಾವುಗಳು ಕಂಡುಬರುತ್ತವೆ. ಹಾವುಗಳು ಜೀವ ಸಂಕುಲದ ಅಪರೂಪದ ಜೀವಿಗಳಾಗಿವೆ. ಯಾವುದೇ ಕಾರಣಕ್ಕೂ ಅವುಗಳನ್ನು ಸಾಯಿಸಬೇಡಿ. ಜನವಸತಿ ಪ್ರದೇಶಗಳ ಬಳಿ ಕಂಡುಬಂದ ವೇಳೆ ತಮಗೆ ಮಾಹಿತಿ ನೀಡಿದರೆ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲಾಗುವುದು ಎಂದು ನಾಗರೀಕರಿಗೆ ಮನವಿ ಮಾಡಿದ್ದಾರೆ.

Shivamogga, March 24: An interesting incident has taken place in Shivamogga city where not one, not two, but 69 water snake babies were found in the water tank of a house. Reptile conservationist Snake Kiran successfully rescued all these baby snakes after conducting an operation for two consecutive days.

shimoga | 21 hakkipikki community members from Shivamogga and Davangere arrested in Gabon Africa! shimoga | ಆಫ್ರೀಕಾದ ಗಬಾನ್ ದೇಶದಲ್ಲಿ ಬಂಧನಕ್ಕೊಳಗಾದ ಶಿವಮೊಗ್ಗ ದಾವಣಗೆರೆಯ 21 ಹಕ್ಕಿಪಿಕ್ಕಿಗಳು! Previous post shimoga | ಆಫ್ರಿಕಾದ ಗಬಾನ್ ದೇಶದಲ್ಲಿ ಬಂಧನಕ್ಕೊಳಗಾದ ಶಿವಮೊಗ್ಗ, ದಾವಣಗೆರೆಯ 21 ಹಕ್ಕಿಪಿಕ್ಕಿಗಳು!
Bhadravati: A young man who left home in the evening mysteriously disappeared! bhadravati | ಭದ್ರಾವತಿ : ಸಂಜೆ ವೇಳೆ ಮನೆಯಿಂದ ಹೊರಹೋದ ಯುವಕ ನಿಗೂಢ ಕಣ್ಮರೆ! Next post bhadravati | ಭದ್ರಾವತಿ : ಸಂಜೆ ವೇಳೆ ಮನೆಯಿಂದ ಹೊರಹೋದ ಯುವಕ ನಿಗೂಢ ಕಣ್ಮರೆ!