Bhadravati: A young man who left home in the evening mysteriously disappeared! bhadravati | ಭದ್ರಾವತಿ : ಸಂಜೆ ವೇಳೆ ಮನೆಯಿಂದ ಹೊರಹೋದ ಯುವಕ ನಿಗೂಢ ಕಣ್ಮರೆ!

bhadravati | ಭದ್ರಾವತಿ : ಸಂಜೆ ವೇಳೆ ಮನೆಯಿಂದ ಹೊರಹೋದ ಯುವಕ ನಿಗೂಢ ಕಣ್ಮರೆ!

ಭದ್ರಾವತಿ (bhadravathi), ಮಾ. 24: ಮನೆಯಿಂದ ಹೊರ ತೆರಳಿದ ಯುವಕನೋರ್ವ, ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾದ ಘಟನೆ ಭದ್ರಾವತಿ ನಗರದ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಮಾ. 24 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ಶಶಿಕುಮಾರ್ (30) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಮಾರ್ಚ್ 11 ರ ಸಂಜೆ ಶಶಿಕುಮಾರ್ ಅವರು ಮನೆಯಿಂದ ಹೊರ ತೆರಳಿದ್ದರು.

ನಂತರ ಅವರು ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ. ಕುಟುಂಬದವರು ಎಲ್ಲೆಡೆ ಅವರಿಗಾಗಿ ಹುಡುಕಿದರೂ ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಹರೆ : ನಾಪತ್ತೆಯಾದ ಶಶಿಕುಮಾರ್ ಸುಮಾರು 6 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಹೊಂದಿದ್ದಾರೆ. ಎದೆ ಮಧ್ಯೆ ಜಿಂಕೆ ಪ್ರಾಣಿಯ ಹಚ್ಚೆ ಗುರುತಿದೆ.

ಕಾಣೆಯಾದ ವೇಳೆ ಸಿಮೆಂಟ್ ಬಣ್ಣದ ನೈಟ್ ಪ್ಯಾಂಟ್, ಪಾಚಿ ಹಸಿರು ಬಣ್ಣದ ಶರ್ಟ್ ಧರಿಸಿರುತ್ತಾರೆ. ಇವರ ಸುಳಿವು ಲಭ್ಯವಾದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಮನವಿ ಮಾಡಿದೆ.

Bhadravati, March 24: An incident occurred in the old town police station limits of Bhadravati city where a young man, who had left home, mysteriously disappeared without returning.

The police department issued a statement on March 24 regarding this. Shashikumar (30) has been identified as the missing youth. Shashikumar had left home on the evening of March 11.

shimoga | Shivamogga: There were exactly 69 baby snakes in the water tank..! shimoga | ಶಿವಮೊಗ್ಗ : ನೀರಿನ ತೊಟ್ಟಿಯಲ್ಲಿದ್ದವು ಬರೋಬ್ಬರಿ 69 ಹಾವಿನ ಮರಿಗಳು..! Previous post shimoga | ಶಿವಮೊಗ್ಗ : ಅಬ್ಬಬ್ಬಾ… ನೀರಿನ ತೊಟ್ಟಿಯಲ್ಲಿದ್ದವು ಬರೋಬ್ಬರಿ 69 ಹಾವಿನ ಮರಿಗಳು..!
milk price hike | Nandini milk price hike: More burden on consumers! milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ! Next post milk price hike | ಹಾಲಿನ ದರ ಏರಿಕೆ ಪ್ರಸ್ತಾಪ : ಸಚಿವ ಸಂಪುಟದ ತೀರ್ಮಾನದತ್ತ ಚಿತ್ತ!