
ಹಿರಿಯ ಅರ್ಚಕ ಹೆಚ್.ಎಸ್.ತಿಪ್ಪಾಶಾಸ್ತ್ರೀ ವಿಧಿವಶ
ಶಿವಮೊಗ್ಗ, ಜ. 4: ವಯೋಸಹಜ ಕಾರಣಗಳ ಹಿನ್ನೆಲೆಯಲ್ಲಿ, ಹಿರಿಯ ಅರ್ಚಕ ಹೆಚ್.ಎಸ್.ತಿಪ್ಪಾಶಾಸ್ತ್ರೀ (86) ಅವರು ಬುಧವಾರ ಮುಂಜಾನೆ ಶಿವಮೊಗ್ಗ ನಗರದ ಕೆ.ಹೆಚ್.ಬಿ ಪ್ರೆಸ್ ಕಾಲೋನಿ ಶ್ರೀ ಬಡಾವಣೆಯಲ್ಲಿನ ನಿವಾಸದಲ್ಲಿ ವಿಧಿವಶರಾದರು.
ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಗರದ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್.ಎಸ್.ತಿಪ್ಪಾಶಾಸ್ತ್ರೀ ಅವರು ಮೂಲತಃ ತೀರ್ಥಹಳ್ಳಿ ತಾಲೂಕು ಆರಗ ಸಮೀಪದ ಮೆಟ್ಲುಗೋಡು ಗ್ರಾಮದ ನಿವಾಸಿಯಾಗಿದ್ದಾರೆ. ಭದ್ರಾವತಿ ಪಟ್ಟಣದ ಜನ್ನಾಪುರ ಉಡುಸಲಮ್ಮ ದೇವಾಲಯದಲ್ಲಿ ಸುಮಾರು 15 ವರ್ಷಕ್ಕೂ ಹೆಚ್ಚು ಕಾಲ ಅರ್ಚಕರಾಗಿದ್ದರು. ಪೌರೋಹಿತ್ಯ, ಹರಿಕಥೆ ನಡೆಸಿಕೊಡುತ್ತಿದ್ದರು. ಸಾಕಷ್ಟು ಹೆಸರು ಸಂಪಾದಿಸಿದ್ದರು.
ಹೆಚ್.ಎಸ್.ತಿಪ್ಪಾಶಾಸ್ತ್ರೀ ಅವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.