shimoga | Shivamogga: Increased demand for railway underpass - Will MPs pay attention? shimoga | ಶಿವಮೊಗ್ಗ : ರೈಲ್ವೆ ಅಂಡರ್ ಪಾಸ್’ಗೆ ಹೆಚ್ಚಿದ ಬೇಡಿಕೆ - ಗಮನಹರಿಸುವರೆ ಸಂಸದರು?

shimoga | ಶಿವಮೊಗ್ಗ : ರೈಲ್ವೆ ಅಂಡರ್ ಪಾಸ್’ಗೆ ಹೆಚ್ಚಿದ ಬೇಡಿಕೆ – ಗಮನಹರಿಸುವರೆ ಸಂಸದರು?

ಶಿವಮೊಗ್ಗ (shivamogga), ಮಾ. 29: ಶಿವಮೊಗ್ಗ ನಗರದ ಕಾಶೀಪುರ ಪಶು ವೈದ್ಯಕೀಯ ಕಾಲೇಜ್ ರಸ್ತೆ ಹಾಗೂ ಜೆ ಹೆಚ್ ಪಟೇಲ್ ಬಡಾವಣೆಯ, ರವಿ ಶಂಕರ್ ವಿದ್ಯಾಲಯ ಸಮೀಪದ ರಸ್ತೆ ನಡುವೆ ಹಾದು ಹೋಗಿರುವ ರೈಲ್ವೆ ಹಳಿಗೆ, ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂಬ ಆಗ್ರಹ ಸುತ್ತಮುತ್ತಲಿನ ಬಡಾವಣೆಗಳ ನಾಗರೀಕರಿಂದ ಕೇಳಿಬರಲಾರಂಭಿಸಿದೆ.

ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿದರೆ, ಕೇವಲ 100 ಅಡಿಗಳ ಅಂತರದಲ್ಲಿ ಸುತ್ತಮುತ್ತಲಿನ ಬಡಾವಣೆಗಳ ನಡುವೆ ವಾಹನಗಳ ಸಂಚಾರ ಸಾಧ್ಯವಾಗಲಿದೆ. ಇದರಿಂದ ಸಾವಿರಾರು ನಾಗರೀಕರಿಗೆ ಸಹಕಾರಿಯಾಗಲಿದೆ. ಬಡಾವಣೆಗಳ ನಡುವಿನ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ.

ಸದ್ಯ ಜೆ ಹೆಚ್ ಪಟೇಲ್ ಬಡಾವಣೆ, ಸಹ್ಯಾದ್ರಿ ನಗರ ಸುತ್ತಮುತ್ತಲಿನ ಭಾಗದ ನಾಗರೀಕರು ಕಾಶೀಪುರ, ಪಶುವೈದ್ಯಕೀಯ ಕಾಲೇಜ್ ಭಾಗದ ಬಡಾವಣೆಗಳಿಗೆ ವಾಹನಗಳಲ್ಲಿ ತೆರಳಬೇಕಾದರೆ ಸುಮಾರು ನಾಲ್ಕೈದು ಕಿಲೋ ಮೀಟರ್ ದೂರ ಕ್ರಮಿಸಬೇಕಾಗಿದೆ.

ಆದರೆ ಅಂಡರ್ ಪಾಸ್ ನಿರ್ಮಾಣದಿಂದ ಕೇವಲ ಸರಿಸುಮಾರು 100 ಅಡಿ ಅಂತರದಲ್ಲಿ ಸಂಪರ್ಕ ಸಾಧ್ಯವಾಗಲಿದೆ. ಜೊತೆಗೆ ಕಾಶೀಪುರ ಭಾಗದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆ, ಸಿದ್ದಗಂಗಾ ಬಡಾವಣೆ, ಮುನಿಯಪ್ಪ ಲೇಔಟ್, ಲಕ್ಕಪ್ಪ ಲೇಔಟ್, ಜೆ ಹೆಚ್ ಪಟೇಲ್ ಬಡಾವಣೆ ಸಿ ಬ್ಲಾಕ್ ಸೇರಿದಂತೆ

ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಗಾಡಿಕೊಪ್ಪ, ಎಪಿಎಂಸಿ ತರಕಾಗಿ ಮಾರುಕಟ್ಟೆ, ಕಲ್ಲಳ್ಳಿ, ರಾಷ್ಟ್ರೀಯ ಹೆದ್ಧಾರಿ, ಗೋಪಾಳಗೌಡ ಬಡಾವಣೆ ಮತ್ತೀತರ ಪ್ರದೇಶಗಳ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂಬುವುದು ನಾಗರೀಕರ ಅಭಿಮತವಾಗಿದೆ.

ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಖಾಸಗಿ ಜಾಗ ಸ್ವಾದೀನ ಪಡಿಸಿಕೊಳ್ಳುವ ಅಗತ್ಯವಿಲ್ಲವಾಗಿದೆ. ಹಾಗೆಯೇ ಎರಡೂ ಕಡೆ ಸಂಪರ್ಕ ರಸ್ತೆಗಳಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಎತ್ತರದ ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ಇರುವುದರಿಂದ ಅಂಡರ್ ಪಾಸ್ ನಿರ್ಮಣಕ್ಕೆ ಹೆಚ್ಚು ವೆಚ್ಚ ತಗುಲುವುದಿಲ್ಲ ಎಂದು ನಾಗರೀಕರು ಹೇಳುತ್ತಾರೆ.

ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಈಗಾಗಲೇ ರೈಲ್ವೆ ಇಲಾಖೆ ಮೂಲಕ, ಹುಚ್ಚುರಾಯ ಕಾಲೋನಿ ಸಮೀಪದ ರೈಲ್ವೆ ಹಳಿಗೆ ಫ್ಲೈ ಓವರ್ ಹಾಗೂ ಪಿ ಅಂಡ್ ಟಿ ಕಾಲೋನಿ ಬಳಿ ಅಂಡರ್ ಪಾಸ್ ನಿರ್ಮಿಸಿದ್ದಾರೆ. ಸದರಿ ಸ್ಥಳದಿಂದ ಕೆಲ ಕಿಲೋ ಮೀಟರ್ ದೂರದಲ್ಲಿರುವ ಪಶು ವೈದ್ಯಕೀಯ ಕಾಲೇಜ್ ಬಳಿಯೂ ಅಂಡರ್ ಪಾಸ್ ನಿರ್ಮಿಸಿದರೆ ಜನ – ವಾಹನಗಳ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ.

ಈ ನಿಟ್ಟಿನಲ್ಲಿ ಸಂಸದರು ಆದ್ಯ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಿ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಬಡಾವಣೆಗಳ ನಿವಾಸಿಗಳು ಮನವಿ ಮಾಡುತ್ತಾರೆ.

Shivamogga, Mar. 29: Demands for the construction of an underpass for the railway track passing between Kashipur Veterinary College Road and the road near Ravi Shankar Vidyalaya in JH Patel Layout in Shivamogga city have started to be heard from the citizens of the surrounding layouts.

If an underpass is constructed at the said location, it will be possible to move vehicles between the surrounding areas within a distance of just 100 feet. This will be helpful to thousands of citizens. Citizens are of the opinion that it will bring a revolutionary change in the connectivity system between the areas.

'I will not leave the JDS party for any reason': Shivamogga Rural MLA Sharada Pooryanaik's response to Minister Madhu Bangarappa's Congress invitation ‘ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯಲ್ಲ’ : ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ Previous post shimoga | ‘ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯಲ್ಲ’ : ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್
shimoga | Shivamogga: Drinking water problem – DC Khadak warns officials! shimoga | ಶಿವಮೊಗ್ಗ : ಕುಡಿಯುವ ನೀರು ಸಮಸ್ಯೆ – ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ! Next post shimoga | ಶಿವಮೊಗ್ಗ : ಕುಡಿಯುವ ನೀರು ಸಮಸ್ಯೆ – ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ!