
ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ!
ಶಿವಮೊಗ್ಗ, ಮಾ. 31: ಸೂಕ್ತ ದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದ ಘಟನೆ, ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
‘ಒಟ್ಟಾರೆ 26 ಕ್ವಿಂಟಾಲ್ ತೂಕದ 100 ಬ್ಯಾಗ್ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 1.56 ಲಕ್ಷ ರೂ.ಗಳಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
‘ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸೂಕ್ತ ದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
In#assemblyelection, #checkpost, #election, #electioncheckpost, #electioncommission, #electionnews, #electionnewsupdate, #karnatakaassemblyelection, #mlaelection, #modelcodeofconduct, #policeraid, #raid, #shimogaelectionnews, #shimoganews, #Shivamogga, #shivamogganews #shimogalocalnews, #shivamogganews #shimoganews, #shivamoggasuddi, #svvep, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಅಸೆಂಬ್ಲಿಎಲೆಕ್ಷನ್, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಎಲೆಕ್ಷನ್_ನ್ಯೂಸ್, #ಚುನಾವಣಾಆಯೋಗ, #ಚುನಾವಣಾವರದಿ, #ಚುನಾವಣೆನ್ಯೂಸ್, #ಚೆಕ್_ಪೋಸ್ಟ್, #ಜಿಲ್ಲಾಪೊಲೀಸ್_ಇಲಾಖೆ, #ದಾಖಲೆಯಿಲ್ಲದೆಸಾಗಿಸುತ್ತಿದ್ದಅಕ್ಕಿಚೀಲವಶ, #ನೀತಿಸಂಹಿತೆ, #ಮಾದರಿನೀತಿಸಂಹಿತೆ, #ವಿಧಾನಸಭೆಚುನಾವಣೆ, #ವಿಧಾನಸಭೆಚುನಾವಣೆಮಾದರಿನೀತಿಸಂಹಿತೆ, #ಶಿವಮೊಗ್ಗ, #ಶಿವಮೊಗ್ಗಚುನಾವಣೆನ್ಯೂಸ್, #ಶಿವಮೊಗ್ಗನ್ಯೂಸ್