Shimoga Municipal Corporation area revision: Proposal not submitted to the government! shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಸರ್ಕಾರಕ್ಕೆ ಸಲ್ಲಿಕೆಯಾಗದ ಪ್ರಸ್ತಾವನೆ!

shimoga | ಶಿವಮೊಗ್ಗ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಹೆಚ್ಚುವರಿ ಕೌಂಟರ್ : ಶೇ. 5 ರಷ್ಟು ವಿನಾಯ್ತಿ!

ಶಿವಮೊಗ್ಗ (shivamogga), ಮಾ. 29: ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಶಿವಮೊಗ್ಗ ಪಾಲಿಕೆ ಕಚೇರಿ ಆವರಣದಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ಪ್ರಾರಂಭ ಮಾಡಲಾಗಿದೆ. ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ ಎಂದು ಪಾಲಿಕೆ ಾಯುಕ್ತರು ತಿಳಿಸಿದ್ದಾರೆ.

ಈ ಕುರಿತಂತೆ ಮಾ. 29 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್‌ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್‌ಲೈನ್‌ನಲ್ಲಿ ಹಾಗೂ ಯುಪಿಐ/ನೆಟ್‌ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಡಿಯಲ್ಲಿಯೂ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ.

ವಿಶೇಷವಾಗಿ 2025-26 ರ ಖಾತೆದಾರರಿಗೆ ಇಡಿಸಿ (ಪಿಓಎಸ್) ಯಂತ್ರಗಳ ಮೂಲಕ ಸ್ವತ್ತಿನ ಆಸ್ತಿ ತೆರಿಗೆಯನ್ನು ಪಾವತಿಸಿದ ರಸೀದಿಯನ್ನು ನೀಡಲಾಗುತ್ತದೆ.

2025-26 ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರು, ಏಪ್ರಿಲ್ 2025 ರೊಳಗಾಗಿ ಪಾವತಿಸಿದ್ದಲ್ಲಿ ಶೇ. 5 ರ ತೆರಿಗೆ ವಿನಾಯಿತಿಯನ್ನು ನೀಡಲಾಗುವುದು. ಜೂನ್ 2025 ರ ಅಂತ್ಯದವರೆಗೆ ದಂಡವಿಲ್ಲದೆ ಪಾವತಿಸಬಹುದು ಹಾಗೂ ಜುಲೈ 1 ರಿಂದ ಪ್ರತಿ ತಿಂಗಳಿಗೆ ಶೇ. 2 ರಂತೆ ದಂಡ ಪಾವತಿಸ ಬೇಕಾಗಿರುತ್ತದೆ.

ಸಾರ್ವಜನಿಕರು ಏಪ್ರಿಲ್ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, Mar. 29: Additional counters have been opened in the Shivamogga Municipal Corporation office premises to facilitate the payment of property tax. The Municipal Commissioner said that the public will be able to pay property tax directly at the office.

A notification in this regard was issued on March 29. Similarly, as is already in force, property tax payment can be made online through the Municipal Corporation’s website address www.shivamoggacitycorp.org and also under the UPI/Netbanking/Debit Card/Credit Card system.

shimoga | Shivamogga: Drinking water problem – DC Khadak warns officials! shimoga | ಶಿವಮೊಗ್ಗ : ಕುಡಿಯುವ ನೀರು ಸಮಸ್ಯೆ – ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ! Previous post shimoga | ಶಿವಮೊಗ್ಗ : ಕುಡಿಯುವ ನೀರು ಸಮಸ್ಯೆ – ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ!
Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Next post rain alert | ಬಿರು ಬಿಸಿಲಿನ ನಡುವೆ ಮತ್ತೆ ಭಾರೀ ಮಳೆ ಮುನ್ಸೂಚನೆ!