shimoga | Shivamogga: Students were shocked to see a fight between poisonous snakes near the college hostel!shimoga | ಶಿವಮೊಗ್ಗ : ಕಾಲೇಜ್ ಹಾಸ್ಟೆಲ್ ಬಳಿ ವಿಷಪೂರಿತ ಹಾವುಗಳ ಕಾಳಗ ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು!

shimoga | ಶಿವಮೊಗ್ಗ : ಕಾಲೇಜ್ ಹಾಸ್ಟೆಲ್ ಬಳಿ ವಿಷಪೂರಿತ ಹಾವುಗಳ ಕಾಳಗ ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು!

ಶಿವಮೊಗ್ಗ (shivamogga), ಮಾ. 31: ಶಿವಮೊಗ್ಗ ನಗರದ ಹೊರವಲಯ ಪಶು ವೈದ್ಯಕೀಯ ಕಾಲೇಜ್ ನ ಬಾಲಕರ ಹಾಸ್ಟೆಲ್ ಬಳಿ ವಿಷಪೂರಿತ ನಾಗರಹಾವು ಹಾಗೂ ಕೊಳಕು ಮಂಡಲ ಹಾವುಗಳ ನಡುವೆ ಕಾಳಗ ಏರ್ಪಟ್ಟು, ಕೊನೆಗೆ ಕೊಳಕು ಮಂಡಲ ಹಾವನ್ನೇ ನಾಗರಹಾವು ನುಂಗಲು ಯತ್ನಿಸಿದ ಅಪರೂಪದ ಘಟನೆ ಮಾ. 30 ರ ಸಂಜೆ 6. 30 ರ ವೇಳೆ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು, ಎರಡೂ ವಿಷಪೂರಿತ ಹಾವುಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ್ದಾರೆ. ನಾಗರಹಾವಿನ ದಾಳಿಯಿಂದ ಕೊಳಕು ಮಂಡಲ ಹಾವು ಸಂಪೂರ್ಣ ನಿತ್ರಾಣಗೊಂಡಿದೆ ಎಂದು ಕಿರಣ್ ಅವರು ಮಾಹಿತಿ ನೀಡಿದ್ದಾರೆ.

ಸುಮಾರು 5 ಅಡಿ ಉದ್ದದ ಬೃಹದಾಕಾರದ ನಾಗರಹಾವೊಂದು, ಹಾಸ್ಟೆಲ್ ನ ಒಳ ಆವರಣದಲ್ಲಿ ಕಾಣಿಸಿಕೊಂಡಿತ್ತು. ನಂತರ ಹಾಸ್ಟೆಲ್ ಕಟ್ಟಡ ಪಕ್ಕದ ಬಿಲದಲ್ಲಿ ಸೇರಿಕೊಂಡಿದೆ. ಇದೇ ಬಿಲದಲ್ಲಿ ಸುಮಾರು 3 ಅಡಿ ಉದ್ದದ ಕೊಳಕು ಮಂಡಲ ಹಾವು ಮೊದಲೇ ಅಡಗಿಕೊಂಡಿತ್ತು.

ಈ ವೇಳೆ ಎರಡು ಹಾವುಗಳ ನಡುವೆ ಕಾದಾಟ ಏರ್ಪಟ್ಟಿದ್ದು, ಬಿಲದಿಂದ ಹೊರಬಂದಿವೆ. ಕಾಳಗದಲ್ಲಿ ಕೊಳಕು ಮಂಡಲ ಹಾವನ್ನು ಮಣಿಸಿದ ನಾಗರಹಾವು, ಮಂಡಲ ಹಾವನ್ನೇ ನುಂಗಲು ಮುಂದಾಗಿದೆ. ಬೃಹದಾಕಾರದ ವಿಷಪೂರಿತ ಹಾವುಗಳ ಸೆಣಸಾಟ ಕಂಡ ಹಾಸ್ಟೆಲ್ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.

ಇದೇ ವೇಳೆ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು ಹಾವುಗಳ ಸಂರಕ್ಷಣೆಗೆ ದೌಡಾಯಿಸಿದ್ದಾರೆ. ಸರಿಸುಮಾರು 8. 30 ರ ವೇಳೆಗೆ ಅರ್ಧ ನುಂಗಿದ್ದ ಕೊಳಕು ಮಂಡಲ ಹಾವನ್ನು, ನಾಗರಹಾವು ಹೊರ ಹಾಕಿದೆ. ನಂತರ ನಾಗರಹಾವನ್ನು ಸ್ನೇಕ್ ಕಿರಣ್ ಸಂರಕ್ಷಣೆ ಮಾಡಿದ್ದಾರೆ.

ಸತ್ತಂತೆ ಕೆಳಕ್ಕೆ ಬಿದ್ದಿದ್ದ ಕೊಳಕು ಮಂಡಲ ಹಾವು, ಕ್ರಮೇಣ ಚೇತರಿಸಿಕೊಂಡು ಸ್ಥಳದಿಂದ ಹೋಗಲು ಮುಂದಾಗಿದೆ. ತಕ್ಷಣವೇ ಮಂಡಲ ಹಾವನ್ನು ರಕ್ಷಣೆ ಮಾಡಲಾಯಿತು. ಕೊಳಕು ಮಂಡಲ ಹಾವು ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಕಿರಣ್ ಅವರು ಮಾರ್ಚ್ 31 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, Mar. 31: A rare incident took place on Mar. 30 at 6.30 pm when a fight broke out between a poisonous cobra and a ressel vipar snake near the boys’ hostel of the Veterinary Medical College on the outskirts of Shivamogga city.

Snake conservationist Snake Kiran, who reached the spot after learning about the incident, has safely rescued both the venomous snakes. Kiran informed that the ressel vipar snake was completely weakened by the cobra attack.

shimoga | Shivamogga: 8 thousand cusecs of water again from Bhadra Dam: When? What is the reason? shimoga | ಶಿವಮೊಗ್ಗ : ಭದ್ರಾ ಡ್ಯಾಂನಿಂದ ಮತ್ತೆ 8 ಸಾವಿರ ಕ್ಯೂಸೆಕ್ ನೀರು : ಯಾವಾಗ? ಕಾರಣವೇನು? Previous post bhadra dam | ಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಹರಿಸಲು ನಿರ್ಧಾರ : ಕಾರಣವೇನು?
Shimoga rain alert : Heavy rain forecast with thunder! ಶಿವಮೊಗ್ಗ : ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ! Next post shimoga rain alert | ಶಿವಮೊಗ್ಗ : ಜೋರು ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಮುನ್ಸೂಚನೆ!