
shimoga rain alert | ಶಿವಮೊಗ್ಗ : ಜೋರು ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಮಾ. 31: ಇತ್ತೀಚೆಗೆ ರಾಜ್ಯದ ಹಲವೆಡೆ ರಣ ಬಿಸಿಲಿನ ನಡುವೆಯೂ, ಭರ್ಜರಿ ಮುಂಗಾರು ಪೂರ್ವ ಮಳೆಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಹಲವೆಡೆ ಚದುರಿದಂತೆ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿತ್ತು. ಆದರೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಇಲ್ಲಿಯವರೆಗೂ ಮಳೆಯ ದರ್ಶನವಾಗಿಲ್ಲ!
ಈ ನಡುವೆ ಭಾರತೀಯ ಹವಾಮಾನ ಇಲಾಖೆಯು, ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ. ಆಲಿಕಲ್ಲು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಸಂಬಂಧ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಒರಿಸ್ಸಾದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಏಪ್ರಿಲ್ 1 ರಿಂದ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗಲಿದ್ದು, ಏ. 3 ರಿಂದ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ಮಲೆನಾಡಲ್ಲಿ ರಣ ಬಿಸಿಲು : ರಾಜ್ಯದ ವಿವಿಧೆಡೆ ಉತ್ತಮ ಬೇಸಿಗೆ ಮಳೆಯಾದರೂ ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳು ಹೊರತುಪಡಿಸಿದರೆ, ಇತರೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.
ಮತ್ತೊಂದೆಡೆ, ಜಿಲ್ಲೆಯಾದ್ಯಂತ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷ ತಾಪಮಾನದ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತಿದೆ. ಕೆಲವೊಮ್ಮೆ ಗರಿಷ್ಠ 35 ರಿಂದ 37 ಡ್ರಿಗ್ರಿ ಸೆಲ್ಸಿಯಸ್ ಅವರೆಗೂ ಉಷ್ಣಾಂಶ ದಾಖಲಾಗುತ್ತಿದೆ.
ಬಿರು ಬಿಸಿಲಿನಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ. ಜಲಮೂಲಗಳು ಕೂಡ ಕ್ರಮೇಣ ಬರಿದಾಗಲಾರಂಭಿಸಿವೆ. ಹಸಿರು ಹುಲ್ಲು ಒಣಗಿದೆ. ಇದರಿಂದ ಜಾನುವಾರುಗಳ ಮೇವಿಗೆ ತೀವ್ರ ಸ್ವರೂಪದ ತತ್ವಾರ ಕಂಡುಬಂದಿದೆ. ಬೇಸಿಗೆಯಲ್ಲಿ ಉತ್ತಮ ಮಳೆಯಾದರ, ಜಾನುವಾರುಗಳಿಗೆ ಮೇವು – ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.
Shivamogga, Mar 31: Despite the scorching heat, heavy pre-monsoon rains lashed many parts of the state recently. Scattered rains accompanied by thunder and lightning occurred in many parts of Shivamogga district. However, some areas of the district have not seen any rain so far!
Meanwhile, the Indian Meteorological Department has forecast widespread rainfall with thunderstorms, lightning and hail in 25 districts of the state, including Shivamogga district, in the coming days. It has issued a yellow alert in this regard.