shimoga | Shivamogga: 8 thousand cusecs of water again from Bhadra Dam: When? What is the reason? shimoga | ಶಿವಮೊಗ್ಗ : ಭದ್ರಾ ಡ್ಯಾಂನಿಂದ ಮತ್ತೆ 8 ಸಾವಿರ ಕ್ಯೂಸೆಕ್ ನೀರು : ಯಾವಾಗ? ಕಾರಣವೇನು?

shimoga | bhadra dam | ಶಿವಮೊಗ್ಗ : ಭದ್ರಾ ಡ್ಯಾಂನಿಂದ ತುಂಗಭದ್ರಾ ಜಲಾಶಯಕ್ಕೆ ನೀರು – ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆಯೇನು?

ಶಿವಮೊಗ್ಗ (shivamogga), ಮಾ. 31 : ಭದ್ರಾ ಜಲಾಶಯದಿಂದ ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ ಏಪ್ರಿಲ್ 1 ರಿಂದ ನೀರು ಹರಿಸಲಾಗುತ್ತಿರುವುದರಿಂದ, ಭದ್ರಾ ನದಿಪಾತ್ರದಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಈ ಕುರಿತಂತೆ ಮಾ. 31 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಕುಡಿಯುವ ನೀರು ಹಾಗೂ ಬೆಳೆ ಸಂರಕ್ಷಣೆ ಉದ್ದೇಶದಿಂದ, ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.

ಏಪ್ರಿಲ್ 1 ರ ಸಂಜೆ 6 ಗಂಟೆಯಿಂದ ಪ್ರತಿನಿತ್ಯ 8 ಸಾವಿರ ಕ್ಯೂಸೆಕ್ ನಂತೆ, ಮೂರು ದಿನಗಳ ಕಾಲ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವುದರಿಂದ ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ಜಾನುವಾರುಗಳ ಮೈ ತೊಳೆಯುವುದು ಹಾಗೂ ದೈನಂದಿನ ಚಟುವಟಿಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ನದಿಯಿಂದ ಅನದಿಕೃತವಾಗಿ ವಿದ್ಯುತ್ / ಡಿಸೇಲ್ ಪಂಪ್ ಸೆಟ್ ಹಾಗೂ ಟ್ಯಾಂಕರ್ ಗಳ ಮೂಲಕ ನೀರು ಕೊಂಡೊಯ್ಯುವುದನ್ನ ಕೂಡ ನಿಷೇಧಿಸಲಾಗಿದೆ.

ನದಿಪಾತ್ರದಲ್ಲಿನ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, Mar. 31: The Superintending Engineer, who is also the member secretary of the Bhadra Project Irrigation Advisory Committee, has informed the public that caution should be exercised in the Bhadra river basin as water is being released from Bhadra Reservoir to Hosapete Tungabhadra Reservoir from April 1.

A notification in this regard was issued on March 31. As per the orders of the state government, water is being released from the Bhadra reservoir to the Tungabhadra reservoir for the purpose of drinking water and crop protection.

The announcement said that water will be released from the Bhadra reservoir into the river at a rate of 8,000 cusecs per day for three days starting from 6 pm on April 1.

Shimoga rain alert : Heavy rain forecast with thunder! ಶಿವಮೊಗ್ಗ : ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ! Previous post shimoga rain alert | ಶಿವಮೊಗ್ಗ : ಜೋರು ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಮುನ್ಸೂಚನೆ!
shimoga | Ugadi moon sighting in Shimoga city..! shimoga | ಶಿವಮೊಗ್ಗ ನಗರದಲ್ಲಿ ಯುಗಾದಿ ಚಂದ್ರ ದರ್ಶನ..! Next post shimoga | ಶಿವಮೊಗ್ಗ ನಗರದಲ್ಲಿ ಯುಗಾದಿ ಚಂದ್ರ ದರ್ಶನ..!