
shimoga | ಶಿವಮೊಗ್ಗ : ಗಬ್ಬೆದ್ದು ನಾರುತ್ತಿರುವ ಚರಂಡಿಗಳು – ಗಮನಹರಿಸುವುದೆ ಪಾಲಿಕೆ ಆಡಳಿತ?
ಶಿವಮೊಗ್ಗ (shivamogga), ಏ. 1: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಗಾಡಿಕೊಪ್ಪದ ಹಲವೆಡೆ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ದುರ್ನಾತ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಗಾಡಿಕೊಪ್ಪದ ಪುರದಾಳು ರಸ್ತೆ, ಬಸವೇಶ್ವರ ರಸ್ತೆ, ಮೈಸೂರು ಬೀದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಚರಂಡಿ ಸ್ವಚ್ಛಗೊಳಿಸಿ ಹಲವು ತಿಂಗಳುಗಳೇ ಆಗಿದೆ. ಇದರಿಂದ ಚರಂಡಿಗಳಲ್ಲಿ ಭಾರೀ ಪ್ರಮಾಣದ ಕಸಕಡ್ಡಿ ತುಂಬಿಕೊಂಡಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕೊಳಚೆ ನೀರು ಸರಾಗವಾಗಿ ಹರಿದು ಹೋಗದಿರುವುದರಿಂದ, ದುರ್ನಾತ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಮತ್ತೊಂದೆಡೆ ಬೇಸಿಗೆ ಸಮಯವಾಗಿರುವುದರಿಂದ ಸೊಳ್ಳೆ, ನೊಣ ಸೇರಿದಂತೆ ಮತ್ತೀತರ ಕ್ರಿಮಿಕೀಟಗಳ ಹಾವಳಿಯೂ ವಿಪರೀತವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಚರಂಡಿಗೆ ಸ್ವಚ್ಛತೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತ ಇತ್ತ ಚಿತ್ತ ಹರಿಸಿಲ್ಲ. ನಮ್ಮಗಳ ಗೋಳು ಆಲಿಸುವವರೇ ಯಾರು ಇಲ್ಲದಂತಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಕ್ಷಣವೇ ಪಾಲಿಕೆ ಆಡಳಿತ ಗಾಡಿಕೊಪ್ಪ ಭಾಗದಲ್ಲಿ ಚರಂಡಿ ಸ್ವಚ್ಛತೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ನಾಗರೀಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿರ್ವಾಯವಾಗಲಿದೆ ಎಂದು ಕೆಲ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
Shivamogga, Mar. 31: Local residents have alleged that the drains in many places in Ward 1 of Gadikoppa under the jurisdiction of Shivamogga Municipal Corporation are filled with garbage and sewage water is not flowing smoothly. It is emitting a foul smell.
It has been several months since the drains in the surrounding areas including Puradalu Road, Basaveshwara Road, and Mysore Street in Gadikoppa were cleaned. Local residents have complained that the drains are filled with a huge amount of garbage as a result.