
shimoga | ಶಿವಮೊಗ್ಗ : ಬಿಗಿ ಪೊಲೀಸ್ ಪಹರೆಯಲ್ಲಿ ಬೇಲಿ ತೆರವು!
ಶಿವಮೊಗ್ಗ (shivamogga), ಏ. 1: ಶಿವಮೊಗ್ಗ ನಗರದ ಡಿಸಿ ಕಚೇರಿ ಎದುರಿನ ಮೈದಾನದ ವಾಹನಗಳ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಬೇಲಿಯನ್ನು, ಏ. 1 ರ ಸಂಜೆ ಬಿಗಿ ಪೊಲೀಸ್ ಪಹರೆಯಲ್ಲಿ ತೆರವುಗೊಳಿಸಲಾಗಿದೆ.
ವಾಹನಗಳ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಮರದ ತುಂಡುಗಳ ಬೇಲಿ ತೆರವಿಗೆ ಆಗ್ರಹಿಸಿ, ಬೆಳಿಗ್ಗೆ ಹಿಂದೂಪರ ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದವು. ಬೇಲಿ ತೆರವುಗೊಳಿಸುವವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.
ಸ್ಥಳಕ್ಕಾಗಮಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು, ಸಂಜೆ 7 ಗಂಟೆಯವರೆಗೆ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದ್ದರು.
ಸಂಜೆಯವರೆಗೂ ಬೇಲಿ ಹಾಕಿದ್ದವರು ತೆರವುಗೊಳಿಸದ ಕಾರಣದಿಂದ, ಮಹಾನಗರ ಪಾಲಿಕೆ ಆಡಳಿತದ ನೆರವಿನೊಂದಿಗೆ ಪೊಲೀಸರು ಬೇಲಿ ತೆರವುಗೊಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಮೈದಾನದ ಸುತ್ತಮುತ್ತಲಿನ ಅಂಗಡಿ – ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಮೈದಾನ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
Shivamogga, Apr. 1: The fence installed at the vehicle entrance of the grounds in front of the DC office in Shivamogga city was removed on the evening of Apr. 1 under heavy police guard. Pro-Hindu organizations had protested at the site this morning, demanding the removal of a wooden fence placed at the vehicle entrance.