
diesel price hike | ಮತ್ತೊಂದು ಶಾಕ್ – ಡೀಸೆಲ್ ದರದಲ್ಲಿ ಏರಿಕೆ!
ಬೆಂಗಳೂರು (bengaluru), ಏ. 1: ಹಾಲು, ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯ ಸರ್ಕಾರವು, ಏ. 1 ರಂದು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಇದರಿಂದ ಲೀಟರ್ ಡೀಸೆಲ್ ಬೆಲೆಯಲ್ಲಿ 2 ರೂ. ಏರಿಕೆಯಾಗಲಿದೆ. ಮಧ್ಯ ರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 18. 44 ರಿಂದ ಶೇ. 21. 77 ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಂಗಳೂರಿನಲ್ಲಿ ಹಾಲಿ 89.02 ರೂ.ಗಳಿರುವ ಡೀಸೆಲ್ ಬೆಲೆಯು, ಮಾರಾಟ ತೆರಿಗೆ ಹೆಚ್ಚಳದಿಂದ 91.02 ರೂ. ಆಗಲಿದೆ.
ಕರ್ನಾಟಕ ರಾಜ್ಯದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆಯು 4-11-2021 ರ ಮೊದಲು ಶೇ.24 ರಷ್ಟಿತ್ತು. ಆಗ ಲೀಟರ್ ಡೀಸೆಲ್ ಬೆಲೆ 92. 03 ರೂ.ಗಳಿತ್ತು. 15-6-2024 ರಂದು ಕರ್ನಾಟಕ ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ. 18. 44 ಕ್ಕೆ ಪರಿಷ್ಕರಿಸಿತ್ತು.
ಇದೀಗ ಮಾರಾಟ ತೆರಿಗೆಯನ್ನು ಮತ್ತೆ ಪರಿಷ್ಕರಣೆ ಮಾಡಿದೆ. ಇದರಿಂದ ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಮತ್ತೊಂದೆಡೆ, ರಾಜ್ಯ ಸರ್ಕಾರವು ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ. ಇತರೆ ಕೆಲ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯದಲ್ಲಿ ಡೀಸೆಲ್ ದರ ಕಡಿಮೆಯಿದೆ ಎಂದು ತಿಳಿಸಿದೆ.
Bengaluru, Apr. 1: Following the hike in milk and electricity prices, the state government has increased the sales tax on diesel on Apr. 1. This will increase the price of diesel by Rs. 2 per liter. The new price will come into effect from midnight.
The state government has ordered an increase in sales tax on diesel from 18.44 percent to 21.77 percent. The current price of diesel in Bengaluru is Rs. 89.02, but due to the increase in sales tax, the price will increase to Rs. 91.02.