sagar | ಸಾಗರ : ಶರಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು! Sagar: Man dies after drowning in Sharavathi river backwaters!

shimoga | ಶಿವಮೊಗ್ಗ : ಸ್ನೇಹಿತರ ನಡುವೆ ಕಲಹ – ಓರ್ವನ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ (shivamogga), ಏ. 2: ಸ್ನೇಹಿತರ ನಡುವೆ ಏರ್ಪಟ್ಟ ಕಲಹ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ, ಶಿವಮೊಗ್ಗ ನಗರದ ಹೊರವಲಯ ತ್ಯಾವರಕೊಪ್ಪದಲ್ಲಿ ಏ. 2 ರಂದು ನಡೆದಿದೆ.

ದೇವರಾಜ್ (31) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ವೆಂಕಟೇಶ್ (36) ಆರೋಪಿಯಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವೆಂಕಟೇಶ್ ಹಾಗೂ ಕೊಲೆಗೀಡಾದ ದೇವರಾಜ್ ಸ್ನೇಹಿತರಾಗಿದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಕೈ ಕೈ ಮಿಲಾವಣೆಯಾಗಿದೆ. 

ಈ ವೇಳೆ ವೆಂಕಟೇಶ್ ಗುದ್ದಲಿಯಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ದೇವರಾಜ್ ಅವರು ಸ್ಥಳದಲ್ಲಿಯೇ  ಮೃತಪಟ್ಟಿದ್ದಾರೆ‌ ಎಂದು ತಿಳಿದುಬಂದಿದೆ. ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.j

Shivamogga, Apr. 2: An incident that ended in the murder of a person following a dispute between friends took place on Apr. 2 in Tyavarakoppa, on the outskirts of Shivamogga city.

CM instructs police to control rowdyism 'ರೌಡಿಸಂ ಮಟ್ಟ ಹಾಕಿ..!' : ಪೊಲೀಸರಿಗೆ ಸಿಎಂ ಖಡಕ್ ಸೂಚನೆ Previous post bengaluru | ‘ರೌಡಿಸಂ ಮಟ್ಟ ಹಾಕಿ..!’ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ
Shikaripura: Serial theft in four locked houses lakhs of rupees worth of cash looted! ಶಿಕಾರಿಪುರ : ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಲೂಟಿ! Next post shikaripur | ಶಿಕಾರಿಪುರ : ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಲೂಟಿ!