
shimoga | ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ – ಏ. 5 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ (shivamogga), ಏ. 3: ಶಿವಮೊಗ್ಗ ನಗರ ಉಪ ವಿಭಾಗ-2 ರ ಘಟಕ-6 ರ ವ್ಯಾಪ್ತಿಯ ಎನ್.ಟಿ. ರಸ್ತೆಯಲ್ಲಿ, ಏ. 5 ರಂದು ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ಹಿನ್ನೆಲೆಯಲ್ಲಿ, 11 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸಲಾಗುತ್ತಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಕುರಿತಂತೆ ಏ. 3 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಏ. 5 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಪೇಪರ್ ಪ್ಯಾಕೇಜ್, ಹರಕೆರೆ, ನ್ಯೂ ಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್,
ಬೆನಕೇಶ್ವರ ರೈಸ್‌ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಗಜಾನನ ಗ್ಯಾರೇಜ್, ಪೀಲೆ ಫ್ಯಾಕ್ಟರಿ, ಶ್ರೀನಿವಾಸ ಲೇಔಟ್, ಇಲಿಯಾಜ್‌ನಗರ 1 ರಿಂದ 4 ನೇ ಅಡ್ಡರಸ್ತೆ,
ಹೊಸಹಳ್ಳಿ, ಲಕ್ಷ್ಮೀಪುರ, ರಾಮಿನಕೊಪ್ಪ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga, Apr. 3: MESCOM has informed that an 11 KV power line is being relocated on N.T. Road, within the limits of Unit-6 of Shivamogga City Sub-Division-2, on Apr. 5, in the wake of National Highway work.
In this regard, a notification was issued on April 3. Due to the work, MESCOM has informed that there will be power outages in various places from 10 am to 6 pm on April 5.
Details: Paper Package, Harakere, New Mandli, Old Mandli, Gandharva Nagar, Shankara Eye Hospital, Narayana Hrudayalaya, Manjunath Rice Mill, Benakeshwar Rice Mill, Annapoorneshwari Layout, Gajanana Garage, Peele Factory, Srinivas Layout, Iliyaznagar 1st to 4th Crossroads,
Hosahalli, Lakshmipur, Raminakoppa, Hosur, Aihole, Bharathinagar, Sharadanagar and surrounding areas. There will be power outage. The public is requested to cooperate, a MESCOM statement said.