shimoga | Shivamogga: 8 thousand cusecs of water again from Bhadra Dam: When? What is the reason? shimoga | ಶಿವಮೊಗ್ಗ : ಭದ್ರಾ ಡ್ಯಾಂನಿಂದ ಮತ್ತೆ 8 ಸಾವಿರ ಕ್ಯೂಸೆಕ್ ನೀರು : ಯಾವಾಗ? ಕಾರಣವೇನು?

shimoga | ಶಿವಮೊಗ್ಗ : ಭದ್ರಾ ಡ್ಯಾಂನಿಂದ ಮತ್ತೆ 8 ಸಾವಿರ ಕ್ಯೂಸೆಕ್ ನೀರು – ಯಾವಾಗ? ಕಾರಣವೇನು?

ಶಿವಮೊಗ್ಗ (shivamogga), ಏ. 4: ಭದ್ರಾ ಜಲಾಶಯದಿಂದ ಏಪ್ರಿಲ್ 5 ರಿಂದ 8 ರವರೆಗೆ, 8 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಈ ಕುರಿತಂತೆ ಏ. 4 ರಂದು ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಪಟ್ಟಣಗಳಿಗೆ, ನದಿ ಪಾತ್ರದ ಗ್ರಾಮಗಳಿಗೆ ಹಾಗೂ ಗದಗ ಜಿಲ್ಲೆಯ ಗದಗ, ಲಕ್ಷ್ಮೀಶ್ವರ, ಮುಂಡರಗಿ, ಶಿರಹಟ್ಟಿ ತಾಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಉದ್ದೇಶಕ್ಕಾಗಿ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಏ. 5 ರಿಂದ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನಂತೆ, ಒಟ್ಟು 4 ದಿನಗಳ ಕಾಲ 8 ಸಾವಿರ ಕ್ಯೂಸೆಕ್ ನೀರನ್ನು ಭದ್ರಾ ಜಲಾಶಯದಿಂದ ತುಂಗಭದ್ರಾ  ನದಿಗೆ ಹರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದೈನಂದಿನ ಚಟುವಟಿಕೆ ಮಾಡುವುದಾಗಲಿ, ನದಿಯಿಂದ ಅನದಿಕೃತವಾಗಿ ವಿದ್ಯುತ್ ಪಂಪ್, ಡೀಸೆಲ್ ಪಂಪ್ ಸೆಟ್ ಮತ್ತು ಟ್ಯಾಂಕರ್ ಗಳ ಮೂಲಕ ನೀರು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನೀರು ಬಿಡುಗಡೆ : ಈಗಾಗಲೇ ಭದ್ರಾ ಜಲಾಶಯದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಕಲ್ಪಿಸುವ ಉದ್ದೇಶದಿಂದ, ಏಪ್ರಿಲ್ 1 ರಿಂದ 5 ರವರೆಗೆ 2 ಟಿಎಂಸಿ ನೀರು ಹರಿಸಲಾಗುತ್ತಿದೆ.

Shivamogga, Apr. 4: The Bhadra Project Irrigation Advisory Committee and Superintending Engineer have said that 8,000 cusecs of water will be released from the Bhadra reservoir from April 5 to 8.

The announcement states that water is being released from the Bhadra reservoir for drinking water purposes to the towns of Haveri, Ranebennur, Byadagi, Hirekerur in Haveri district, villages along the river, and urban and rural areas of Gadag, Lakshmiswara, Mundargi, and Shirahatti taluks in Gadag district.

It has been informed that 2 thousand cusecs of water will be released from Bhadra reservoir to Tungabhadra river for a total of 4 days, i.e. 8 thousand cusecs of water will be released from Bhadra reservoir to Tungabhadra river from April 5.

shimoga | Shivamogga: Reserve forest land for Sharavati dam victims – DC makes important statement! shimoga | ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಭೂಮಿ ಡಿ ರಿಸರ್ವ್ – ಡಿಸಿ ಮಹತ್ವದ ಹೇಳಿಕೆ! Previous post shimoga | ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಭೂಮಿ ಡಿ ರಿಸರ್ವ್ – ಡಿಸಿ ಮಹತ್ವದ ಹೇಳಿಕೆ!
Bhovi Corporation scam: ED raids in Bengaluru Shivamogga! bhovi nigama scam | ಭೋವಿ ನಿಗಮ ಹಗರಣ : ಬೆಂಗಳೂರು ಶಿವಮೊಗ್ಗದಲ್ಲಿ ಇಡಿ ರೈಡ್! Next post bhovi nigama scam | ಭೋವಿ ನಿಗಮ ಹಗರಣ : ಬೆಂಗಳೂರು, ಶಿವಮೊಗ್ಗದಲ್ಲಿ ಇ.ಡಿ ರೈಡ್!