shimoga airport | 2 government city buses to Shimoga airport launched shimoga airport | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ

shimoga airport | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ

ಶಿವಮೊಗ್ಗ (shivamogga), ಏ. 5:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಶಿವಮೊಗ್ಗ ವಿಭಾಗದಿಂದ, ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಿದೆ.

ಈ ಕುರಿತಂತೆ ಏ. 5 ರಂದು ಪ್ರಕಟಣೆ ಬಿಡುಗಡೆ ಮಾಡಿದೆ.  ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9. 45, 10.00, 12.45, 02.00, 03.00 ಮತ್ತು 3.30 ಕ್ಕೆ ಬಸ್ ಗಳು ಹೊರಡಲಿವೆ.

ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಯಿಂದ ಬೆಳಿಗ್ಗೆ 10.40, 11.40, 01.30, 02.45, 3.35 ಹಾಗೂ 4.05 ರ ಸಮಯದಲ್ಲಿ ಬಸ್ ಗಳು ಹೊರಡಲಿವೆ.

ಸಾರ್ವಜನಿಕರು ಸದರಿ ಸಿಟಿ  ಬಸ್‌ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga, Apr. 5: Karnataka State Road Transport Corporation has started plying 2 city transport buses from Shivamogga division to Rashtrakavi Kuvempu Airport / Kachinkatte.

A notification in this regard was issued on April 5. Buses will leave from Shivamogga bus stand at 9.45 am, 10.00 am, 12.45 pm, 02.00 pm, 03.00 pm and 3.30 pm. Similarly, buses will depart from Rashtrakavi Kuvempu Airport/Kachinkatte at 10.40 am, 11.40 am, 01.30 am, 02.45 am, 3.35 am and 4.05 am.

The Divisional Controller of the Karnataka State Road Transport Corporation has issued a notification requesting the public to avail the facilities of the said city buses.

shimoga | Shivamogga: Power outage on April 7th till 6 pm! shimoga | ಶಿವಮೊಗ್ಗ : ಏ. 7 ರಂದು ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ! Previous post shimoga | ಶಿವಮೊಗ್ಗ : ಏ. 7 ರಂದು ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
Licenses of 6 childcare institutions in Shivamogga district cancelled! ಶಿವಮೊಗ್ಗ ಜಿಲ್ಲೆಯಲ್ಲಿನ 6 ಮಕ್ಕಳ ಪಾಲನಾ ಸಂಸ್ಥೆಗಳ ಪರವಾನಗಿ ರದ್ದು! Next post shimoga | ಶಿವಮೊಗ್ಗ ವಿನೋನಬಗರ ಠಾಣೆ ಇನ್ಸ್’ಪೆಕ್ಟರ್ ಸಸ್ಪೆಂಡ್!