ನೋವು ನಿರೋಧಕ, ಹೃದ್ರೋಗ, ಮಧುಮೇಹ, ಮಲೇರಿಯಾ ಸೇರಿದಂತೆ ಹಲವು ಜೀವ ರಕ್ಷಕ ಔಷಧಗಳ ಬೆಲೆ ಏರಿಕೆ ಮಾಡಿರುವ ಕ್ರಮ ಖಂಡನಾರ್ಹ. ತಕ್ಷಣವೇ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜೀವ ರಕ್ಷಕ ಔಷಧಗಳ ಬೆಲೆ ಹೆಚ್ಚಳ  : ಮುಖಂಡ ಕಲ್ಲೂರು ಮೇಘರಾಜ್ ಆಕ್ರೋಶ

ಶಿವಮೊಗ್ಗ, ಏ. 1: ನೋವು ನಿರೋಧಕ, ಹೃದ್ರೋಗ, ಮಧುಮೇಹ, ಮಲೇರಿಯಾ ಸೇರಿದಂತೆ ಹಲವು ಜೀವ ರಕ್ಷಕ ಔಷಧಗಳ ಬೆಲೆ ಏರಿಕೆ ಮಾಡಿರುವ ಕ್ರಮ ಖಂಡನಾರ್ಹ. ತಕ್ಷಣವೇ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ ನಗರದ  ಮೀಡಿಯಾ ಹೌಸ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು 384 ಜೀವ ರಕ್ಷಕ ಅಗತ್ಯ ಔಷಧಿಗಳ ಬೆಲೆಯನ್ನು ಶೇ. 12.12 ರಷ್ಟು ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಆದೇಶ ಜಾರಿಗೊಳಿಸಲಾಗಿದೆ. ಈ ಮೂಲಕ ಜನಸಾಮಾನ್ಯರು, ಬಡ, ಮಧ್ಯಮ ವರ್ಗದವರ ಮೇಲೆ ಗದಾಪ್ರಹಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ತಯಾರಿಸಲಾಗುವ ಅತ್ಯಗತ್ಯ ಔಷಧಿಗಳಿಗೆ ಬೇಕಾದ ಕಚ್ಚಾ ವಸ್ತುವಾದ ‘ಎಪಿಐ’ ಗೆ, ವಿದೇಶಗಳನ್ನು ಅವಲಂಬಿಸಬೇಕಾದ ಸ್ಥಿತಿಯಿದೆ. ದೇಶೀಯವಾಗಿ ‘ಎಪಿಐ’ಗಳ ತಯಾರಿಕೆಯಲ್ಲಿ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ವಿದೇಶಗಳ ಮೇಲಿನ ಅವಲಂಬನೆ ಹೆಚ್ಚಾಗಿಸಿದೆ. ಇದು ದೇಶದಲ್ಲಿ ಜೀವ ರಕ್ಷಕ ಔಷಧಗಳ ಬೆಲೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ದೂರಿದ್ದಾರೆ.

ದೇಶೀಯವಾಗಿ ‘ಎಪಿಐ’ ಘಟಕಗಳ  ಸ್ಥಾಪನೆಗೆ ಉತ್ತೇಜನ ನೀಡಬೇಕು. ಪ್ರಸ್ತುತ ಔಷಧಗಳ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಕಲ್ಲೂರು ಮೇಘರಾಜ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನೇತ್ರಾವತಿ, ನಾಗರತ್ನಕುಮಾರ್, ಕೋಡ್ಲು ಶ್ರೀಧರ್, ಶಂಕ್ರನಾಯ್ಕ್, ಪುಷ್ಪಲತಾ, ಲಿಂಗರಾಜು ಸೇರಿದಂತೆ ಮೊದಲಾದವರಿದ್ದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ, ಸೂಕ್ತ ದಾಖಲೆಯಿಲ್ಲದೆ ಸಾಗಾಣೆ ಮಾಡುತ್ತಿದ್ದ ಕೋಟ್ಯಾಂತರ ರೂಪಾಯಿ ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ, ಬುಲೆರೋ ಕಾರಿನಲ್ಲಿ 1.40 ಕೋಟಿ ರೂ. ಪತ್ತೆಯಾಗಿದೆ. Previous post ಎರಡು ಚೆಕ್ ಪೋಸ್ಟ್ ಗಳಲ್ಲಿ 1.60 ಕೋಟಿ ರೂ. ವಶ..!
#ಕರ್ನಾಟಕವಿಧಾನಸಭೆ ಚುನಾವಣೆ2023 #ಕರ್ನಾಟಕವಿಧಾನಸಭೆಎಲೆಕ್ಷನ್, #ಕರ್ನಾಟಕವಿಧಾನಸಭೆ, #ವಿಧಾನಸಭೆಚುನಾವಣೆ, #ಅಸೆಂಬ್ಲಿಎಲೆಕ್ಷನ್, #ಕರ್ನಾಟಕವಿಧಾನಸಭೆಚುನಾವಣೆಗೆವೇಳಾಪಟ್ಟಿಪ್ರಕಟ, #ಅಸೆಂಬ್ಲಿಎಲೆಕ್ಷನ್, #ವಿಧಾನಸಭೆಚುನಾವಣೆ, #ಚುನಾವಣಾವೇಳಾಪಟ್ಟಿ, Next post ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಡಿಸಿ ನೀಡಿದ ಸೂಚನೆಯೇನು?