Licenses of 6 childcare institutions in Shivamogga district cancelled! ಶಿವಮೊಗ್ಗ ಜಿಲ್ಲೆಯಲ್ಲಿನ 6 ಮಕ್ಕಳ ಪಾಲನಾ ಸಂಸ್ಥೆಗಳ ಪರವಾನಗಿ ರದ್ದು!

shimoga | ಶಿವಮೊಗ್ಗ ವಿನೋನಬಗರ ಠಾಣೆ ಇನ್ಸ್’ಪೆಕ್ಟರ್ ಸಸ್ಪೆಂಡ್!

ಶಿವಮೊಗ್ಗ (shivamogga), ಏ. 5: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಿ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ತವ್ಯಲೋಪದ ಆರೋಪದ ಮೇರೆಗೆ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳ ಹಿಂದೆಯೇ ಅಮಾನತ್ತು ಆದೇಶ ಹೊರಬಿದ್ದಿದೆ ಎಂದು ಹೇಳಲಾಗಿದೆ.

ಈದ್ಗಾ ಮೈದಾನ ವಿವಾದದ ನಂತರ ಎಸ್ಪಿ ಅವರು ಎಲ್ಲ ಇನ್ಸ್’ಪೆಕ್ಟರ್ ಹಾಗೂ ಸಬ್ ಇನ್ಸ್’ಪೆಕ್ಟರ್ ಗಳ ಸಭೆ ನಡೆಸಿದ್ದರು. ಸದರಿ ಸಭೆಗೆ ಸಕಾರಣವಿಲ್ಲದೆ ಚಂದ್ರಕಲಾ ಅವರು ಗೈರು ಹಾಜರಾಗಿದ್ದರು ಎನ್ನಲಾಗಿದೆ.

ಅವರ ಕರ್ತವ್ಯ ನಿರ್ವಹಣೆ ಕುರಿತಂತೆ ಕೆಲ ದೂರುಗಳು ಕೇಳಿಬಂದಿದ್ದವು. ಈ ಕುರಿತಂತೆ ಚಂದ್ರಕಲಾರವರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಪೂರ್ವ ವಲಯ ಐಜಿಪಿಗೆ, ಜಿಲ್ಲಾ ರಕ್ಷಣಾಧಿಕಾರಿಗಳು ವರದಿ ಕಳುಹಿಸಿದ್ದರು.

ಇದರ ಆಧಾರದ ಮೇಲೆ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Shivamogga, Apr. 5: It has been learned that Eastern Zone IGP Ravikanthe Gowda has issued an order suspending Inspector Chandrakala of Vinobanagar Police Station in Shivamogga.

Information has been received that Chandrakala has been suspended on charges of dereliction of duty. It is said that the suspension order was issued two days ago.

shimoga airport | 2 government city buses to Shimoga airport launched shimoga airport | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ Previous post shimoga airport | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ
shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ! Next post shimoga rain | ಶಿವಮೊಗ್ಗ ನಗರಕ್ಕೆ ತಂಪೆರೆದ ಸಂಜೆ ಮಳೆ..!