shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ!

shimoga rain | ಶಿವಮೊಗ್ಗ ನಗರಕ್ಕೆ ತಂಪೆರೆದ ಸಂಜೆ ಮಳೆ..!

ಶಿವಮೊಗ್ಗ (shivamogga), ಏ. 5: ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ ನಗರಕ್ಕೆ, ಏ. 5 ರ ಸಂಜೆ ಬಿದ್ದ ಮುಂಗಾರು ಪೂರ್ವ ಮಳೆ ತಂಪೆರೆಯಿತು!

ಇತ್ತೀಚೆಗೆ ಜಿಲ್ಲೆ ಹಾಗೂ ತಾಲೂಕಿನ ಹಲವೆಡೆ ಚದುರಿದಂತೆ ಬೇಸಿಗೆ ಮಳೆಯಾದರೂ, ಶಿವಮೊಗ್ಗ ನಗರದಲ್ಲಿ ಮಳೆಯಾಗಿರಲಿಲ್ಲ. ಮತ್ತೊಂದೆಡೆ, ನಗರದಲ್ಲಿ ಬಿಸಿಲ ಬೇಗೆ ಹೆಚ್ಚಾಗಿತ್ತು. ತಾಪಮಾನದ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಮಟ್ಟದಲ್ಲಿ ದಾಖಲಾಗುತ್ತಿತ್ತು.

ಆದರೆ ಶನಿವಾರ ಸಂಜೆ ಸುಮಾರು 1 ಗಂಟೆಗೂ ಅಧಿಕ ಕಾಲ ನಗರದಲ್ಲಿ ಉತ್ತಮ ಮಳೆಯಾಯಿತು. ಇದರಿಂದ ನಾಗರೀಕರು ನಿಟ್ಟುಸಿರು ಬಿಡುವಂತಾಯಿತು.  ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಯಿತು.

ಶಿವಮೊಗ್ಗ ನಗರ ಮಾತ್ರವಲ್ಲದೆ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಶನಿವಾರ ಸಂಜೆ ಭರ್ಜರಿ ಮಳೆಯಾದ ವರದಿಗಳು ಬಂದಿವೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ.

ಪ್ರಸ್ತುತ ವರ್ಷ ಭಾರೀ ಪ್ರಮಾಣದ ತಾಪಮಾನಕ್ಕೆ ಕೆಲ ಗ್ರಾಮಗಳಲ್ಲಿ ಜಲಮೂಲಗಳು ಬರಿದಾಗಲಾರಂಭಿಸಿದ್ದವು. ಅಂತರ್ಜಲ ಮಟ್ಟದಲ್ಲಿ ಇಳಿಕೆ ಕಂಡುಬಂದಿತ್ತು. ಇದರಿಂದ ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಾರಂಭಿಸಿತ್ತು.

ಮಳೆ ಮುನ್ಸೂಚನೆ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣದಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕೆಲ ದಿನಗಳವರೆಗೆ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Shivamogga, Apr. 5: The pre-monsoon rains that fell on the evening of Apr. 5 brought relief to the city of Shivamogga, which was like a hotbed of scorching heat!

Although there was scattered summer rain in many parts of the district and taluk recently, there was no rain in Shivamogga city. On the other hand, the city was experiencing intense heat. The temperature was recording more than 35 degrees Celsius. #ಮಳೆ, #shimogarain, #shivamogga,

Licenses of 6 childcare institutions in Shivamogga district cancelled! ಶಿವಮೊಗ್ಗ ಜಿಲ್ಲೆಯಲ್ಲಿನ 6 ಮಕ್ಕಳ ಪಾಲನಾ ಸಂಸ್ಥೆಗಳ ಪರವಾನಗಿ ರದ್ದು! Previous post shimoga | ಶಿವಮೊಗ್ಗ ವಿನೋನಬಗರ ಠಾಣೆ ಇನ್ಸ್’ಪೆಕ್ಟರ್ ಸಸ್ಪೆಂಡ್!
shimoga | Shimoga: Heavy rain is forecast to continue! shimoga | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ! Next post shimoga rain alert | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!