
shimoga rain alert | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!
ಶಿವಮೊಗ್ಗ (shivamogga), ಏ. 6: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಏ. 5 ರಂದು ಉತ್ತಮ ಮಳೆಯಾಗಿದೆ. ಹಲವೆಡೆ ಸಂಜೆಯಿಂದ ತಡರಾತ್ರಿಯವರೆಗೂ ಭರ್ಜರಿ ಮಳೆಯಾದ ವರದಿಗಳು ಬಂದಿವೆ. ಇದರಿಂದ ಬೇಸಿಗೆ ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಪ್ರದೇಶಗಳು ಕೊಂಚ ತಂಪಾಗುವಂತಾಗಿದೆ.
ಈ ನಡುವೆ ಏ. 6 ರಂದು ಕೂಡ ಮಲೆನಾಡಿನ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇನ್ನೂ ಕೆಲ ದಿನಗಳ ಕಾಲ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ತಿಳಿಸಿದೆ.
ತಣ್ಣನೆ ವಾತಾವರಣ : ಜಿಲ್ಲೆಯ ಹಲವೆಡೆ ಬೇಸಿಗೆ ಮಳೆಯಾದರೂ, ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಮಳೆಯಾಗಿರಲಿಲ್ಲ. ಬಿಸಿಲ ತಾಪ ಹೆಚ್ಚಾಗಿತ್ತು. ಆದರೆ ಶನಿವಾರ ನಗರ ಸೇರಿದಂತೆ ತಾಲೂಕಿನ ಹಲವೆಡೆ ಸಂಜೆಯಿಂದ ತಡರಾತ್ರಿಯವರೆಗೂ ಮಳೆಯಾಯಿತು.
ಹಲವು ತಿಂಗಳುಗಳ ನಂತರ ಬಿದ್ದ ಮಳೆಯಿಂದ ರಾತ್ರಿ ನಗರದಲ್ಲಿ ತಣ್ಣನೆಯ ವಾತಾವರಣ ನೆಲೆಸಿತ್ತು. ಮಳೆಯ ಬೆನ್ನಲ್ಲೇ, ಭಾನುವಾರ ಬೆಳಿಗ್ಗೆಯಿಂದ ಬಿಸಿಲ ತಾಪದ ಪ್ರಮಾಣವೂ ಕೂಡ ಹೆಚ್ಚಾಗಿದೆ.
ಮಲೆನಾಡು ಭಾಗ ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ರಣ ಬೇಸಿಗೆಯಲ್ಲಿ ಬೀಳುತ್ತಿರುವ ಮಳೆಯಿಂದ, ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿದೆ.
Shivamogga, Apr. 6: Many places in the district, including Shivamogga city, received good rainfall on Apr. 5. Reports of heavy rains from evening to late night have come from many places. This has brought some cooling to the areas that were sweltering in the summer heat.
Although many parts of the district received summer rains, there was no rain in many parts of Shivamogga city and taluk. The heat was high. However, on Saturday, many parts of the taluk, including the city, received rain from evening to late night.
#ಮಳೆ, #ಶಿವಮೊಗ್ಗಮಳೆ, #ಮುಂಗಾರುಪೂರ್ವಮಳೆ, #ಬೇಸಿಗೆಮಳೆ, #ಮಳೆ, #ಮಳೆಅಲರ್ಟ್, #ಮಳೆಮುನ್ಸೂಚನೆ, #rain, #rainalert, #rainfall, #rainfallinshimoga, #shimoga, #shivamogga, #ಶಿವಮೊಗ್ಗ,